17 ಸಾವಿರಕ್ಕಿಂತ ಅಧಿಕ ಜನಸಂಖ್ಯೆಯುಳ್ಳ ಬಳ್ಳಾರಿಯ ಸಿರಿಗೆರೆಯಲ್ಲಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೆ ಅನುಕೂಲವಾಗುವಂತೆ ಆಧಾರ್ ಸೇವಾ ಕೇಂದ್ರದ ಅವಶ್ಯಕತೆಯ ಕುರಿತು ಮೇ 6 ರಂದು ಸುದ್ದಿ ಪ್ರಕಟವಾಗಿತ್ತು. ಸಾರ್ವಜನಿಕರ ಅಗತ್ಯವನ್ನು ಗಮನಿಸಿದ ಅಂಚೆ ಇಲಾಖೆ, ಬಳ್ಳಾರಿ ವಿಭಾಗವು ಇಂದಿನಿಂದ ಸಿರಿಗೆರೆ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆಗಳನ್ನು ಒದಗಿಸಲು ಪ್ರಾರಂಭಿಸಿದೆ ಎಂದು ತಿಳಿದು ಬಂದಿದೆ.
ಬಳ್ಳಾರಿಯ ಸಿರಿಗೆರೆಯಲ್ಲಿ ಆಧಾರ್ ಸೇವಾ ಕೇಂದ್ರ ಆರಂಭ
Bysaraswatiprabha.com
ಮೇ 13, 2026 #aadhar service center, #Ballari, #Kannada News, #Post Office, #Saraswati Prabha, #sirigere
