ಡಾ.ಕೆ.ಎಸ್. ಭಟ್ಸ್, ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್, ಕೋತಲ್ ಕಟ್ಟೆ, NH 66 ಕಾಪು

ಕಾಪು ಪರಿಸರದ ಜನತೆಗೆ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಕಾಪು, ತನ್ನ ಆರೋಗ್ಯ ಸೇವಾ ಸಂಸ್ಥೆಯು ಯಶಸ್ವೀ ಐದು ವರ್ಷ ಪೂರೈಸಿದ ಸಂತಸದ ಪ್ರಯುಕ್ತ..ಇದೇ ಬರುವ ತಾರೀಕು 01 ನವೆಂಬರ್ 2026, ಆದಿತ್ಯವಾರದಂದು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.30 ವರೆಗೆ , ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಕೋತಲ್ ಕಟ್ಟೆ, ಕಾಪು ಇದರ ಆವರಣದಲ್ಲಿಐ – ನೀಡ್ಸ್ ಆಪ್ಟಿಕಲ್ ಸಮೂಹ ಸಂಸ್ಥೆಗಳು ಹಾಗೂ ಶ್ರೀ ಧೂತಪಾಪೇಶ್ವರ್ ಲಿಮಿಟೆಡ್, ಇದರ ಆಶ್ರಯ, ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಮತ್ತು ಸಲಹೆ (ಆಯುರ್ವೇದ) ಹಾಗೂ ಉಚಿತ ಮೂಳೆ ಸಾಂದ್ರತಾ ತಪಾಸಣಾ, ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿ. ಶಿಬಿರಾರ್ಥಿಗಳು ಮುಂಚಿತ ನೋಂದಾವಣೆ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9980909951, 9448928299
(ಈ ಆರೋಗ್ಯ ಶಿಬಿರದಲ್ಲಿ – ಎಲ್ಲಾ ರೀತಿಯ ಶಾರೀರಿಕ ರೋಗ ಸಂಬಂಧಿ ದೈಹಿಕ ತಪಾಸಣೆ – ಚಿಕಿತ್ಸಾ ಸಲಹೆ, ವಿಶೇಷವಾಗಿ ಪ್ರಸ್ತುತ ಜನ ಸಾಮಾನ್ಯರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಮೂಳೆ ಆರೋಗ್ಯ ಸಂಬಂಧಿ (ಮೂಳೆ ಸವೆತ – ಮೂಳೆ ಖನಿಜ ಸಾಂದ್ರತೆ ಇಳಿತ, ಗಂಟು ನೋವು, ಬೆನ್ನು ನೋವು) ವಿವಿಧ ಸಮಸ್ಯೆಗಳು ಹಾಗೂ ದೃಷ್ಟಿ ಸಂಬಂಧಿ ಸಮಸ್ಯೆಗಳು, ಸ್ತ್ರೀ ಸಂಬಂಧಿ, ಮುಖ ಸೌಂದರ್ಯ, ಕೇಶ ಸಂಬಂಧಿ ಸಮಸ್ಯೆಗಳಿಗೆ ತಜ್ಞ ವೈದ್ಯರುಗಳಿಂದ ಉಚಿತ ತಪಾಸಣೆ – ಚಿಕಿತ್ಸಾ ಸಲಹೆ ನೀಡಲಾಗುವುದು.
ವೈದ್ಯರ ಸಲಹೆ ಹಾಗೂ ಅಗತ್ಯತೆಯ ಮೇರೆಗೆ ಆಯ್ದ ಶಿಬಿರಾರ್ಥಿಗಳಿಗೆ ಉಚಿತ ಮಧುಮೇಹ ರಕ್ತ ತಪಾಸಣೆಯನ್ನು ಮಾಡಲಾಗುವುದು. ಅವಶ್ಯವಿರುವವರು ಈ ಆರೋಗ್ಯ ತಪಾಸಣಾ ಶಿಬಿರದ ಉಪಯೋಗ ಪಡೆಯಬೇಕೆಂದು ಡಾ. ಸದಾನಂದ ಎಲ್ ಭಟ್ ಕಾಪು, ಎಂ.ಡಿ(ಆಯು). ಡಾ. ಸುಷ್ಮಾ ಎಸ್ ಭಟ್, ಎಂ.ಡಿ(ಆಯು). ಇವರು ವಿನಂತಿಸಿದ್ದಾರೆ.

