ಸೋಮ. ಮೇ 4th, 2026
    Dr
    Spread the love

    ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಮತ್ತು ಅಕ್ಷರ ದೀಪ ಪ್ರತಿಷ್ಠಾನದ ವತಿಯಿಂದ ೦೩.೦೫.೨೦೨೬ ಭಾನುವಾರದಂದು ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ರಾಷ್ಟ್ರೀಯ ಸಾಹಿತ್ಯೋತ್ಸವವನ್ನು ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ, ಶ್ರೀ ಬಸವರಾಜ ಎಸ್.ಯರಗಣವಿ, ಶ್ರೀ ಮೃತ್ಯುಂಜಯ ವಸ್ತ್ರ, ಡಾ. ಗಿರೀಶ್ ದೇಸೂರ್, ಶ್ರೀಮತಿ. ಸೂರ್ಯ ನದಾಫ್, ಶ್ರೀಮತಿ. ಲಕ್ಷ್ಮೀಮೂರ್ತಿ ಆಗಮಿಸಿದ್ದರು.
    ಅಕ್ಷರ ದೀಪ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಕಿನಾಲ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡಾ.ಗಿರೀಶ್ ದೇಸೂರ್ ಅವರು ರವೀಂದ್ರನಾಥ ಟ್ಯಾಗೋರ್ ಅವರ ಜೀವನ, ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದ ಮೇಲೆ ಅವರ ಪ್ರಭಾವದ ಕುರಿತು ಮಾತನಾಡಿದರು. ಶ್ರೀ ಗಣಪತಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.


    ಬಳಿಕ ಕವನ ವಾಚನ ನಡೆಯಿತು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಡಾ. ಗಣೇಶ್ ಕಮಲಾಕರ್ ವೆರ್ಣೇಕರ್ ಸೇರಿ ಡಾ.ಪೂಜಾ ಬೇವೂರು, ಶ್ರೀಮತಿ ಕಾವ್ಯ ಅಂಗಡಿ, ಡಾ.ಗಿರೀಶ್ ದೇಸೂರ್, ಶ್ರೀಮತಿ ಸೂರಯ್ಯ, ಶ್ರೀಮತಿ ಲಕ್ಷ್ಮೀ ಮೂರ್ತಿ, ಡಾ.ನಾವಿ ಮತ್ತು ಪ್ರಾಧ್ಯಾಪಕ ಪ್ರವೀಣ್ ಕುಲಕರ್ಣಿ ಅವರಿಗೆ ಪಂಚತಂತ್ರ ದುರ್ಗಾಸಿಂಗ್ ಪ್ರಶಸ್ತಿ ಮತ್ತು ರವೀಂದ್ರನಾಥ ಟ್ಯಾಗೋರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು


    Spread the love

    ನಿಮ್ಮದೊಂದು ಉತ್ತರ

    ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

    error: Content is protected !!