ಮಂಗಳ. ಸೆಪ್ಟೆಂ 22nd, 2026
    1 1
    Spread the love

    1 2

    ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆ (ರಿ.), ಉಡುಪಿ ಜಿಲ್ಲೆ


    ಉಡುಪಿಯ ಅಂಬಾಗಿಲಿನ ಅಮೃತ್ ಗಾರ್ಡನ್ ಆಡಿಟೋರಿಯಂನಲ್ಲಿ ಸೆಪ್ಟೆಂಬರ್  20 ಭಾನುವಾರ ನಡೆದ ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆಯ ವಿದ್ಯಾ ಪೋಷಕ ನಿಧಿ 2026-27ನೇ ಸಾಲಿನ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನೆಡೆಯಿತು.
    ಉಡುಪಿ, ದಕ್ಷಿಣ ಕನ್ನಡ , ಶಿವಮೊಗ್ಗಹಾಗೂ ಉತ್ತರ ಕನ್ನಡ ಜಿಲ್ಲೆಗಳ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದ ಸಭೆಯಲ್ಲಿ ಒಟ್ಟು 577 ವಿದ್ಯಾರ್ಥಿಗಳಿಗೆ 68.4 ಲಕ್ಷ ರೂಪಾಯಿ ವಿದ್ಯಾ ಪೋಷಕ ನಿಧಿಯ ಮೂಲಕ ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ನೆರವು ವಿತರಿಸಲಾಯಿತು  

                                                                                                                                                                                
     ಉಡುಪಿ -ಆಭರಣ ಜಿಎಸ್‌ಬಿ ಪ್ರತಿಭಾ ಪುರಸ್ಕಾರ:  ಸಾಧಕರಿಗೆ ಗೌರವ — ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ಮತ್ತು ಶೈಕ್ಷಣಿಕ ದತ್ತು ಯೋಜನೆಗೆ ₹68.4 ಲಕ್ಷ ನೆರವು.  ಶಿಕ್ಷಣ, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ
     

    ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ:
    📚 327 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ.

    ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆ:
    🤝 97 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ದತ್ತು ಸ್ವೀಕಾರದ ಮೂಲಕ ನೆರವು. ಹೆತ್ತವರನ್ನು ಕಳೆದುಕೊಂಡ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಈ ಯೋಜನೆಯಡಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

    ಆಭರಣ ಜಿಎಸ್‌ಬಿ ಪ್ರತಿಭಾ ಪುರಸ್ಕಾರ:  ಒಟ್ಟು 577 ವಿದ್ಯಾರ್ಥಿಗಳು ಮತ್ತು ಸಾಧಕರಿಗೆ ಗೌರವ/ಶೈಕ್ಷಣಿಕ ನೆರವು ,   1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ
    🏆 ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ 2 ಮಂದಿಗೆ ಪುರಸ್ಕಾರ.
    🎓 Ph.D – 12
    📚 CA & CS – 13
    🏅 SSLC – 35
    🏅 PUC – 80
    🎓 ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್ ವಿಜೇತರು – 11

    ಸಂಸ್ಕೃತ ವಿದ್ಯಾಭ್ಯಾಸಕ್ಕೆ ವಿಶೇಷ ಪ್ರೋತ್ಸಾಹ:
    📖 ಕಾರ್ಕಳದ ಶ್ರೀ ಭುವನೇಂದ್ರ ಪ್ರೌಢಶಾಲೆಯ 10ನೇ ತರಗತಿಯ ಸಂಸ್ಕೃತ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದ 19 ವಿದ್ಯಾರ್ಥಿಗಳಿಗೆ, ಪಂ. ದಿವಂಗತ ಪಡುಬಿದ್ರೆ ದೇವಿದಾಸ ಶರ್ಮ ದತ್ತಿ ನಿಧಿಯಿಂದ ವಿಶೇಷ ನಗದು ಪುರಸ್ಕಾರ ನೀಡಲಾಗುತ್ತಿದೆ.

    ಉಡುಪಿ, ದ.ಕ., ಉತ್ತರಕನ್ನಡ ಜಿಲ್ಲೆಯ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ಆಭರಣ ಜುವೆಲರ್ಸ್ ಪ್ರಾಯೋಜಕತ್ವದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರದ ಜತೆಗೆ ಭಾಗವಹಿಸಿದವರಲ್ಲಿ ನಾಲ್ವರು ಅದೃಷ್ಟಶಾಲಿಗಳಿಗೆ ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಯಿತು. ಮಾಹೆ ವಿ.ವಿ. ವತಿಯಿಂದ ಕೊಡಲ್ಪಟ್ಟ ಉಪಯುಕ್ತ ಶೈಕ್ಷಣಿಕ ಕಿಟ್ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.  

                                                                                                                                                                                
     ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ  ಒರಿಜಿನಲ್ ಆಭರಣ ಸಂಸ್ತೆಯ ಸುಭಾಸ್ ಕಾಮತ್ , ಮಹೇಶ್ ಕಾಮತ್  ಪ್ರತಿಭಾ ಪುರಸ್ಕಾರ ವಿತರಿಸಿದರು , ಕಟಪಾಡಿ  ಎಸ್ ಎಲ್ ವಿ ಟಿ  ವಿದ್ಯಾ ಸಂಸ್ಥೆಯ ಸತ್ಯೇ೦ದ್ರ ಪೈ,   ಉಡುಪಿ ಅನಂತ ವೈದಿಕ ಕೇಂದ್ರದ ಪ್ರವರ್ತಕರಾದ ವೇದಮೂರ್ತಿ ಶ್ರೀ ಚೇಂಪಿ ರಾಮಚಂದ್ರ ಅನಂತ ಭಟ್, ತ್ರಿಷಾ ವಿದ್ಯಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಗೋಪಾಲಕೃಷ್ಣ ಭಟ್, ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆಯ ಸಹ ಸಂಯೋಜಕ ಶ್ರೀ ಸುಬ್ರಮಣ್ಯ ಪ್ರಭು, ಮಂಗಳೂರು  , ವಿನೋದ್ ಕಾಮತ್ ಕಲ್ಯಾಣಪುರ . ಉಪಸ್ಥಿತರಿದ್ದರು. ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಜಿ ಸತೀಶ್ ಹೆಗಡೆ ಸ್ವಾಗತಿಸಿ ಸಂಚಾಲಕರಾದ ಶ್ರೀ ಆರ್ ವಿವೇಕಾನಂದ ಶೆಣೈ ಯವರು ಪ್ರಸ್ತಾವನೆಗೈದರು.  ಜಿ ಎಸ್ ಬಿಸಮಾಜ ಹಿತ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಲೂರು ನರಸಿಂಹ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿ, ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನದ ಸಂಯೋಜಕರಾದ ಬೆಂಗಳೂರಿನ ವಿಜಯಕುಮಾರ್ ಶೆಣೈ, ಮೂಡಬಿದ್ರೆಯವರು ವಂದಿಸಿದರು.


    Spread the love

    ನಿಮ್ಮದೊಂದು ಉತ್ತರ

    ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

    error: Content is protected !!