
ರಾಯಚೂರಿನ ಬೆಳಕು ಸಾಹಿತ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ವತಿಯಿಂದ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಬೆಳಕು ಸಮ್ಮೇಳನ ಸಮಾರಂಭದಲ್ಲಿ ದಾವಣಗೆರೆಯ ಸಾಲಿಗ್ರಾಮ ಗಣೇಶ್ ಶೆಣೈಯವರು ವಾಣಿಜ್ಯ ನಗರಿ ದಾವಣಗೆರೆಯಲ್ಲಿ ೫ ದಶಕಗಳಿಂದ ಕಠಿಣ ಪರಿಶ್ರಮದಿಂದ ಸಾಂಸ್ಕೃತಿಕ ನಗರಿಯಾಗಿ ಬದಲಾಯಿಸಿದ ಸಾಧನೆಗಳನ್ನು ಗುರುತಿಸಿ ಇಂಟರ್ ನ್ಯಾಷನಲ್ ಸ್ಟಾರ್ ಆವಾರ್ಡ್ನ್ನು ಅದ್ದೂರಿಯ ವಿಜೃಂಭಣೆಯ ವೇದಿಕೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು ಎಂದು ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ತಿಳಿಸಿದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿನೌಕರರ ಸಂಘದ ರಾಜ್ಯ ಖಜಾಂಚಿ ವಿ.ವಿ.ಶಿವರುದ್ರಯ್ಯ ಸಮ್ಮೇಳನವನ್ನು ಉದ್ಘಾಟಿಸಿದರು. ನವದೆಹಲಿಯ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ರಾಷ್ಟ್ರೀಯ ಅಧ್ಯಕ್ಷರಾದ ಬಸವರಾಜ್ ಗುರಿಕಾರ್ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡರು. ಬೆಂಗಳೂರಿನ ವಾಣಿಜ್ಯ ತೆರಿಗೆಯ ಮೇಲ್ಮನವಿ ಜಂಟಿ ಆಯುಕ್ತರಾದ ಶ್ರೀಮತಿ ಕೆ.ಸಿ.ಸುಜಾತಾ, ಮಾಜಿ ಸಚಿವರು, ಹಿರಿಯ ಸಾಹಿತಿಗಳು ಶ್ರೀಮತಿ ಲೀಲಾದೇವಿ ಆರ್.ಪ್ರಸಾದ್, ಗದಗದ ಅಪರ ಜಿಲ್ಲಾಧಿಕಾರಿಗಳಾದ ಡಾ. ದುರುಗೇಶ್ ಕೆ.ಆರ್. ಪ್ರಗತಿಪರ ರೈತರು ಸಮಾಜ ಸೇವಕರಾದ ಡಾ. ಸತ್ಯಪ್ಪ ಬೀರಪ್ಪ ರಾಜೂರ್, ದಾವಣಗೆರೆಯ ಕಲಾಕುಂಚ, ಯಕ್ಷರಂಗ, ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಮುಂತಾದವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಹಿತ್ಯದ ಕೆಲವು ಪುಸ್ತಕಗಳು ಲೋಕಾರ್ಪಣೆ ಆಯಿತು. ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಿತು. ಪ್ರತಿಭಾವಂತ ಮಕ್ಕಳು ಭರತನಾಟ್ಯ, ಕೋಲಾಟ, ಜನಪದ ನೃತ್ಯ, ವೀರಗಾಸೆ, ಸಮೂಹ ನೃತ್ಯ, ಸಮೂಹ ಗಾಯನಗಳು ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ನೆರೆದ ಪ್ರೇಕ್ಷಕರು ತುಂಬಾ ಸಂತೋಷ ವ್ಯಕ್ತಪಡಿಸಿದರು.
ಜಿ.ಸುರೇಶ್‌ನಾಗ್ ಪ್ರಾರ್ಥನೆಯೊಂದಿಗೆ ಈ ಅದ್ಬುತ ಸಮ್ಮೇಳನಕ್ಕೆ ಡಾ. ನಂದು ಪೂಜಾರಿ ಸ್ವಾಗತಿಸಿದರು. ಸಂಸ್ಥೆಯ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ಪ್ರಾಸ್ತಾವಿಕವಾಗಿ ಸಮ್ಮೇಳನದ ವಿವರ ತಿಳಿಸಿದರು. ಶ್ರೀಮತಿ ವೈ.ಕೆ.ಯಶೋಧ ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಎ.ಎಸ್.ಕೆ.ಸ್ವಾಮಿಯವರು ವಂದಿಸಿದರು. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಮಸಿತಿ ಸದಸ್ಯರಾದ ಶ್ರೀಮತಿ ಶಿಲ್ಪಾ ಉಮೇಶ್ ಉಪಸ್ಥಿತರಿದ್ದರು.

