2024ರಲ್ಲಿ ಸರಸ್ವತಿ ಯೂಟ್ಯೂಬ್ ಚಾನಲ್ಲಿನ ವತಿಯಿಂದ ಕರ್ನಾಟಕದ ಪ್ರತಿಭಾವಂತ ಗಾಯಕರಿಗಾಗಿ ಆರಂಭಿಸಿದ್ದ `ಸರಸ್ವತಿ ಪ್ರಭಾ ಆನ್‌ಲೈನ್ ಭಜನೋತ್ಸವ -2024''ರಲ್ಲಿ 40 ಪ್ರತಿಭಾವಂತ ಗಾಯಕರು ಭಾಗವಹಿಸುವುದರ ಮೂಲಕ ಯಶಸ್ವಿಯಾಗಿ ಮುಕ್ತಾಯವಾಯಿತು. ಅತ್ಯುತ್ತಮವಾಗಿ ಹಾಡಿದ 13 ಜನ ಕಲಾವಿದರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಇದೀಗ 2ನೇ ಸರಣಿಯ
ಸರಸ್ವತಿ ಪ್ರಭಾ ಆನ್‌ಲೈನ್ ಭಜನೋತ್ಸವು – 2025” ಸರಸ್ವತಿ ಪ್ರಭಾ ಯೂ ಟ್ಯೂಬ್ ಚಾನಲ್‌ನಲ್ಲಿ ಇದಾಗಲೇ ಆರಂಭವಾಗಿದೆ. ಇದರಲ್ಲಿ ಭಾಗವಹಿಸಲು 16 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೋರ್ವ ಪ್ರತಿಭಾವಂತ ಭಜನಾ ಕಲಾವಿದರಿಗೂ ಅವಕಾಶವಿದ್ದು. ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿರುವದಿಲ್ಲ. ನಾಲ್ಕರಿಂದ ಆರು ನಿಮಿಷದೊಳಗಿನ ಹರಿದಾಸರ ಪದ ಅಥವಾ ಶರಣರ ವಚನಗಳನ್ನು ಸ್ವತಃ ಹಾಡಿ, ಚಿತ್ರೀಕರಿಸಿ ಸೆಪ್ಟಂಬರ್ 30, 2025ರೊಳಗೆ ಸರಸ್ವತಿ ಪ್ರಭಾದ (saraswatiprabha1989@gmail.com ) ಇ-ಮೇಲ್‌ಗೆ ಕಳುಹಿಸಿ ಕೊಡಬಹುದಾಗಿದೆ. ಭಜನಾ ವಿಡಿಯೋಗಳನ್ನು ಚಿತ್ರೀಕರಿಸುವ ಮೊದಲು ತಮ್ಮ ಮೊಬೈಲ್ ಅನ್ನು ಅಡ್ಡಲಾಗಿ ಹಿಡಿದು ಚಿತ್ರೀಕರಿಸ ಬೇಕು. ಅತ್ಯುತ್ತಮವಾದ ಭಜನಾ ವಿಡಿಯೋಗಳಿಗೆ ಈ ವರ್ಷವೂ ಸಹ ನಗದು ಬಹುಮಾನ ನೀಡಲಾಗುವುದು. ತಾವು ಕಳುಹಿಸುವ ಭಜನಾ ವಿಡಿಯೋ ತಾವೇ ಸ್ವತಃ ಹಾಡಿರಬೇಕು, ಕಾಪಿರೈಟ್ ರಹಿತವಾಗಿದ್ದು, ಬೇರೆಲ್ಲಿಯೂ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರಬಾರದು.
ಈ ವರ್ಷದ ಸರಸ್ವತಿ ಪ್ರಭಾ ಭಜನೋತ್ಸವವನ್ನು ಕಮಲಶಿಲೆ ಯಕ್ಷಗಾನ ಮೇಳದ ಸಂಸ್ಥಾಪಕರು, ಯಕ್ಷಗುರುಗಳೂ ಆಗಿರುವ ದಿ|| ಆರಗೋಡು ರಾಮಚಂದ್ರ ಶ್ಯಾನುಭಾಗರಿಗೆ ಅವರ ಜನ್ಮ ದಿನಾಚರಣೆಯ110 ವರ್ಷಾಚರಣೆಯ ಸಂದರ್ಭದಲ್ಲಿ ಅವರಿಗೆ ಗೌರವಪೂರ್ವಕವಾಗಿ ಅರ್ಪಿಸಲಾಗಿದೆ. ಯಕ್ಷಗಾನ ಕ್ಷೇತ್ರಕ್ಕೆ ಅವರು ನೀಡಿರುವ ಸೇವೆಯನ್ನು ಅರಿಯಲು ಈ ಲಿಂಕ್ ನೋಡಿರಿ https://youtu.be/YPsD8g19kQ8?si=VKu9eApe9KQBG6r0
ಸರಸ್ವತಿ ಪ್ರಭಾ ಭಜನೋತ್ಸವ 2025ರ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ತಮ್ಮ ವಿಡಿಯೋಗಳನು ಕಳುಹಿಸಿ ಕೊಡಲು ನಮ್ಮ saraswatiprabha1989@gmail.com ಇ ಮೇಲ್ ಐಡಿ ಅನ್ನು ಬಳಸಿರಿ. ತಮ್ಮ ವಾಟ್ಸಫ್ ಇರುವ ಮೊಬೈಲ್ ನಂಬರ್ ಹಾಗೂ ಹೆಸರು ವಿಳಾಸವನ್ನು ಕಡ್ಡಾಯವಾಗಿ ನೀಡಬೇಕು. ಈ ತನಕ ನಾವು ಅಪ್‌ಲೋಡ್ ಮಾಡಿರುವ ಈ ವರ್ಷದ ಭಜನಾ ವಿಡಿಯೋಗಳನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ ಮಾಡಿರಿ.https://youtube.com/playlist?list=PL56H11d3MAPm5ZigVIE51PuKJ8QLw4dBc&si=IpyrGg2pfwxQQSEy