
ಮಾನವ ಶರೀರದಲ್ಲಿ ೧೪ ಲೋಕಗಳಿವೆ. ಪಾದದ ತಳಭಾಗದಲ್ಲಿ ಪಾತಾಳ ಲೋಕವಿದೆ. ಶಟ್ ಚಕ್ರ, ಸಪ್ತವಾರ, ಸಪ್ತವರ್ಣ, ಏಳು ಗ್ರಹಗಳು ಗಾಯತ್ರಿ ಮಂತ್ರದಲ್ಲಿ ತುರಿಯಾ ಸ್ಥಿತಿ ತಲುಪುತ್ತದೆ. ಭೂ ಭುವ ಸ್ವಃ…… ಅನ್ನುವುದೇ ಎಂಬ ಪೂರ್ಣ ಭರವಸೆಯಿಂದ ಸಂಕಲ್ಪಿಸುತ್ತೇವೆ. ಕೇವಲ ನಾಲ್ಕೇ ನಾಲ್ಕು ಪುಟ್ಟ ಸಾಲುಗಳು ಸಹಸ್ರ ಸಕಲ ಲೋಕಗಳಲ್ಲಿಯೂ ನೆಲೆಸಿರುವುದರಿಂದ ಈಕೆಯು ವಿಶ್ವವ್ಯಾಪಿಸಿ ವಿಶ್ವವೆಂದ್ಯ ಎನಿಸಿದ್ದಾಳೆ.

ಸವಿತೃ ಮಂತ್ರವು ಗಾಯತ್ರಿ ಛಂದಸ್ಸಿನಲ್ಲಿದ್ದು ಗಾಯತ್ರೀ ಮಂತ್ರದಿಂದಲೇ ಪ್ರಸಿದ್ಧವಾಗಿದೆ. ಮಂತ್ರವನ್ನು ಧ್ಯಾನಕ್ಕೆ ಬಳಸಿದಾಗ ಧ್ಯಾನ ಮಂತ್ರವಾಗುತ್ತದೆ. ಮಾನಸಿಕ ಧ್ಯಾನವು ವಿಶೇಷ ಫಲಕಾರಿ. ಇದರಲ್ಲಿ ಮಂತ್ರದ ಮಾನಸಿಕ ಜಪವನ್ನು ಉಸಿರಾಟದೊಡನೆ ಹೊಂದಿಕೊಳ್ಳಬೇಕು. ಎಲ್ಲ ಜಪಕ್ಕೂ ಇದೇ ಕ್ರಮ. ಧ್ಯಾನಕ್ಕೆಂದು ಮಂತ್ರ ಬಳಸಿದರೆ ಅದು ಸುಗುಣ ಧ್ಯಾನ ಎನಿಸಿಕೊಳ್ಳುತ್ತದೆ. ಗಾಯತ್ರೀ ಮಂತ್ರ ತುರಿಯಾ ಸ್ಥಿತಿಗೆ ತಲುಪಿಸುತ್ತದೆ. ರಾಮಾಯಣ, ಮಹಾಭಾರತ, ಭಗವದ್ಗೀತೆ, ಭಾಗವತಗಳೂ ಸಹ ಇವುಗಳು ನಿತ್ಯ ಪಾರಾಯಣ ಅನುಷ್ಠಾನ ಎನಿಸಿಕೊಳ್ಳುತ್ತದೆ. ನಮ್ಮ ಅನೇಕ ಸಮಸ್ಯೆಗಳು ತಮ್ಮಿಂದ ತಾವೇ ನಿವಾರಣೆಯಾಗುತ್ತದೆ.
ಎಲ್ಲಾ ಲೋಕಗಳ ಜೀವಕೋಟಿಗಳ ಸಂರಕ್ಷಣೆಯ ಜವಾಬ್ದಾರಿಯೂ ತುಂಬಿದೆ. ಇಂತಹ ಶಕ್ತಿಯ ಉಪಾಸನೆಯಿಂದ ಆಯಸ್ಸು ವೃದ್ಧಿಸುವುದು. ಪ್ರಜ್ಞಾಶಕ್ತಿ ಹೆಚ್ಚುವುದು ಆರಾಧಿಸುವವರ ಮುಖದಲ್ಲಿ ಬ್ರಹ್ಮತೇಜಸ್ಸು ದೀದಿಪ್ಯಗೊಳ್ಳುವುದೆಂದು ಮನಸ್ಮೃತಿ ತಿಳಿಸುತ್ತದೆ. ಜ್ಞಾನವು ವಿಕಸಿತವಾಗಿ ಅಪೂರ್ವ ಎನಿಸಿದ ಸತ್ಯ ಸೌಂದರ್ಯವನ್ನು ಸಂದರ್ಶಿಸಲು ಸುಲಭ ಸಾಧ್ಯ ಎನಿಸುವುದು. ಮನಸ್ಸನ್ನು ಚಂಚಲಗೊಳಿಸುವ ವಿಷಯ ವಿಕಾರಗಳು ತಾವೇ ತಾವಾಗಿ ದೂರ ಆಗುವುದು. ಅಖಂಡಬೆನಿಸುವ ಆತ್ಮ ಜ್ಞಾನವು ಪ್ರಾಪ್ತವಾಗುವುದು.
ಬೆಳಕಿನ ಶಕ್ತಿ ಉಪಾಸನವನ್ನು ಯಾವುದೇ ಲೌಕಿಕ ಪಾಪ ಕೃತ್ಯಗಳಲ್ಲೂ ತೊಡಗದಂತೆ ತಡೆ ಹಿಡಿಯುತ್ತದೆ. ದುಷ್ಫಲವನ್ನು ಪರಿಣಾಮಕಾರಿ ಎನಿಸಲು ಬಿಡದೆ ದಹಿಸಿ ಬಿಡುತ್ತದೆ. ಗಾಯತ್ರೀ ಸಾಧನ ಮತ್ತು ಅನುಷ್ಠಾನಗಳಿಂದ ದೈವೀಕ ಗುಣಗಳು ನಿರಂತರವಾಗಿ ವಿಕಾಸಗೊಳ್ಳುತ್ತದೆ. ಒಂದು ಗಾಯತ್ರೀ ಮಂತ್ರದಿಂದ ಉಳಿದ ಎಲ್ಲಾ ಮಂತ್ರಗಳ ಶಕ್ತಿಯನ್ನು ಸಾಧ್ಯವಾಡಿಕೊಳ್ಳಲು ಬರುತ್ತದೆ. ಜಗತ್ತಿನಲ್ಲಿ ಕೋಟ್ಯಾದಿ ಮಂತ್ರಗಳು ಇದ್ದು, ಒಂದೊಂದು ಮಂತ್ರ ಒಂದೊಂದು ಕೆಲಸವನ್ನು ಮಾಡುತ್ತದೆ. ಆದರೆ ಈ ಎಲ್ಲಾ ಮಂತ್ರಗಳ ಕೆಲಸ ಗಾಯತ್ರೀ ಮಂತ್ರ ಮಾಡುತ್ತದೆ.
ಸಹಸ್ರಕೋಟಿ ಸಮಪ್ರಭ
ಸಹಸ್ರ ಕೋಟಿ ಸೂರ್ಯನ ಪ್ರಕಾಶ ನಮ್ಮೊಳಗೆ ಬೆಳಗುವುದು ದಿವ್ಯ ಎಂಬ ಶಬ್ಧದಿಂದಲೇ.. ಶಾರೀರಿಕ ಸೂರ್ಯನಾದ ಆತ್ಮನನ್ನು ಬಲಗೊಳಿಸುವುದೇ ಇದರ ಉದ್ದೇಶ. ಸೂರ್ಯ ದೋಷಗಳು ಜಾತಕದಲ್ಲಿ ಕಂಡುಬಂದಾಗ ಅಂಥವನನ್ನು ಸಂಧ್ಯಾವಂದನೆಗೆ ಪ್ರೇರೇಪಿಸಬೇಕು. ಗಾಯತ್ರೀ ಮಂತ್ರೋಪದೇಶವನ್ನು ಬ್ರಹ್ಮೋಪದೇಶ ಎಂದು ಕರೆಯುವರು. ಕಾರಣ ಪರಬ್ರಹ್ಮನ ಸಾಕ್ಷಾತ್ಕಾರ ಮತ್ತು ಸಕಲ ರೂಪದ ಅಜ್ಞಾನವನ್ನು ಕಳೆಯುವ ಶಕ್ತಿ ಸಾಮರ್ಥ್ಯವು ಈ ಮಂತ್ರ ಮಹಿಮೆಯಿಂದಲೇ ಲಭ್ಯ. ಈ ಮಂತ್ರದ ದೇವತೆ ಸಕಲ ಮಂತ್ರಗಳ ಮುಖ್ಯ ದ್ರಷ್ಟಾರ ಶ್ರೀಮನ್ನಾರಾಯಣ ಆಗಿದ್ದಾನೆ. ವಿಶ್ವಾಮಿತ್ರರು ಬ್ರಹ್ಮ ತೇಜಸ್ಸಿನ ಮುಂದೆ ಶಿರಬಾಗಿ ಕಡೆಗೆ ಕ್ಷತ್ರಿಯ, ಬಲಂ, ದಿಗ್ಬಲಂ, ಬ್ರಹ್ಮತೇಜೋ ಬಲಂ, ಬಲಂ ಎಂದುಕೊಂಡಿದ್ದಾನೆ. ವಸಿಷ್ಠ ಮಹರ್ಷಿಗಳ ಬಾಯಿಯಿಂದಲೇ ಬ್ರಹ್ಮರ್ಷಿ ಎಂದು ಕರೆಯಿಸಿಕೊಂಡನು. ಸೂರ್ಯ ಮಂಡಲದ ಮಧ್ಯದಲ್ಲಿರುವ ದೈವೀ ಶಕ್ತಿಯೇ ಗಾಯತ್ರೀ ಚೈತನ್ಯವನ್ನು ನೀಡಿ ಸುರಕ್ಷಿಸಲೆಂದು ಗಾಯತ್ರೀ ಮಂತ್ರದ ಮುಖೇನ ನಾವು ಪರಬ್ರಹ್ಮನನ್ನು ಪ್ರಾರ್ಥಿಸುತ್ತೇವೆ.
ಸತ್ಯದ ಬೆಳಕು ಧೀ: ಶಕ್ತಿ
ಭೂ ಭುವಃ ಸ್ವಃ ಅನ್ನೋದೇ ಪ್ರಾಣ ಅಪಾನ ಮತ್ತು ಧ್ಯಾನ ಈ ಶರೀರ ಹೇಗೆ ನಡೆಯುತ್ತದೆ? ಈ ಪ್ರಪಂಚ ಹೇಗೆ ನಡೆಯುತ್ತದೆ.
ಪ್ರಾಣ, ಅಪಾನ ಹಾಗೂ ಧ್ಯಾನದಿಂದ ಓಂಕಾರ ಅಥವಾ ಗಾಯತ್ರಿಯನ್ನು ಜಪಿಸುವ ಉಪಾಸಕನು ಯಾವಾಗ ತನ್ನೊಳಗೆ ಪ್ರಾಣದ ಸಂಬಂಧವನ್ನು ಜಗತ್ತಿನ ಸಮಷ್ಟಿ ರೂಪ ಪ್ರಾಣದೊಂದಿಗೆ ಜೋಡಿಸಿಕೊಳ್ಳುತ್ತಾನೋ ಆಗ ಅವನು ಒಬ್ಬನಾಗಿ ಉಳಿಯೋದಿಲ್ಲ. ಏಕೆಂದರೆ ಇಡೀ ಪ್ರಪಂಚ ಒಂದಾಗಿ ಬಿಡುತ್ತದೆ. ಯಾವ ವಸ್ತುವಿನಲ್ಲಿ ಪ್ರಾಣವಿದೆಯೋ ಅದರೊಡನೆ ಅವನ ಸಂಬಂಧ ಬೆಳೆದುಬಿಡುತ್ತದೆ. ವೈದಿಕ ತತ್ವ ಜ್ಞಾನ ಕೋಶನುಸಾರ ಈ ವಿಶ್ವವು ವಿರಾಟ ಪರಮ ಪುರುಷನೋರ್ವನ ಶರೀರ. ವೇದವು ಕೂಗಿ ಹೇಳುತ್ತದೆ. ಸ್ವಃ ಅಂತ ಅಂದ ಕೂಡಲೇ ಸೂರ್ಯ ಲೋಕ ಯಾವುದು? ಅದು ಪಿಂಡಾಂಡದಲ್ಲಿದೆಯೋ ಅಥವಾ ನಮ್ಮ ಶರೀರ (ದೇಹ)ದಲ್ಲಿದೆಯೋ ಅದೇ ಬ್ರಹ್ಮಾಂಡದಲ್ಲಿದೆ. ಈ ಸಂಪೂರ್ಣ ವಿಶ್ವದಲ್ಲಿದೆ. ಸರ್ವ ಪಾಪವನ್ನು ಕಳೆದುಕೊಳ್ಳುತ್ತಾನೆ.
ವರೇಣ್ಯಾಮ್……. ಈ ಶಬ್ಧವನ್ನಾಡಿದ ಕೂಡಲೇ ತುಟಿಗಳು ಮುಚ್ಚಿ ಹೋಗುತ್ತವೆ. ಹೊರ ಪ್ರಪಂಚ ಹೊರಗುಳಿದು ಬಿಡುತ್ತದೆ. ಒಳಗಿನ ಪ್ರಪಂಚ ಜಾಗ್ರತವಾಗುತ್ತದೆ.
ತುಟಿಗಳು ಮುಚ್ಚಿ ಹೋದವು ಎನ್ನುವುದರ ಅರ್ಥ ಇನ್ನೇನು ಹೇಳಲು ಬಾಕಿ ಉಳಿಯುವುದಿಲ್ಲ. ನೀನು ವರೇಣ್ಯಮ್…… ಅಂದರೆ ವರಿಸಲು ಯೋಗ್ಯ ಪೂಜಾರ್ಹ. ನಿನ್ನ ಪೂಜೆಯೇ ವಾಸ್ತವಿಕ ಪೂಜೆ. ನಾನು ನಿನ್ನನ್ನು ಹತ್ತಿರದವನಾಗಿ ನಿನ್ನನ್ನು ನನ್ನವನಾಗಿಸಿಕೊಂಡಿರುವೆ. ನಾನು ಸ್ವಯಂ ನನ್ನನ್ನು ನಿನ್ನ ವಶಕ್ಕೆ ಬಿಟ್ಟು ಬಿಟ್ಟಿದ್ದೇನೆ ಎನ್ನುವುದಾಗಿದೆ. ದಿಯೋ ಯೋ ನಃ ಪ್ರಚೋದಯಾತ್
ಯಾವ ಬುದ್ಧಿ ನಿನ್ನ ಕಡೆ ಕರೆದೊಯ್ಯುತ್ತದೋ ಸದಾ-ಸರ್ವದ ನಿನ್ನ ಕಡೆಯೋ ಗೋಗುತ್ತದೊ ಯಾವಾಗಲೂ ನಿನ್ನ ಬಳಿಗೆ ಸಾರುತ್ತದೆಯೋ ಅಂತಹ ಬುದ್ಧಿ ನನಗೆ ಕೊಡು. ಶೀಘ್ರವಾಗಿ ಜನತೆಯ ಕಲ್ಯಾಣಕ್ಕೆ ಫಲಕಾರಿಯಾಗುವಂತೆ ಮುಂದುವರೆಯುವುದು ಎಂಬ ಪೂರ್ಣ ಭರವಸೆಯಿಂದ ಸಂಕಲ್ಪಿಸುತ್ತೇನೆ.
ಮನುಷ್ಯರಿಗೆ ಬೆಳಕು ಯಾವುದು…..? ಸೂರ್ಯನೇ ಬೆಳಕು.
ಸೂರ್ಯ ಅಸ್ತಮಿಸಿದಾಗ ಯಾವುದು ಬೆಳಕು……? ಚಂದ್ರನೇ ಬೆಳಕು?
ಸೂರ್ಯ – ಚಂದ್ರ ಅಸ್ತಮಿಸಿದಾಗ…..? ಅಗ್ನಿಯೇ ಬೆಳಕು.
ಸೂರ್ಯ ಚಂದ್ರರು ಅಸ್ತಮಿಸಿ ಅಗ್ನಿ ಅರಿದಾಗ ಶಬ್ಧ ಬೆಳಕು
ಸೂರ್ಯದೋಷದಿಂದ ತಂದೆ ಜೊತೆಗಿನ ಸಂಬಂಧ ಸರಕಾರ ಮತ್ತು ಅಧಿಕಾರಿಗಳ ಜೊತೆ ಬಿರುಕು ಗಾಯತ್ರಿ ಮಂತ್ರೋಪದೇಶವನ್ನು ಬ್ರಹ್ಮೋಪದೇಶ ಎಂದು ಕರೆಯುವರು. ಕಾರಣ ಪರಬ್ರಹ್ಮನ ಸಾಕ್ಷಾತ್ಕಾರವು ಈ ಮಂತ್ರದ ಮಹಿಮೆಯಿಂದಲೇ ಲಭ್ಯ. ಪರಮಾತ್ಮ-ಜೀವಾತ್ಮ ಸಾಮರಸ್ಯತೆ ಇದೆ. ಸಕಲ ರೂಪದ ಅಜ್ಞಾನವನ್ನು ಕಳೆಯುವ ಶಕ್ತಿ ಸಾಮರ್ಥ್ಯ ಸೂರ್ಯಮಂಡಲದ ಮಧ್ಯಭಾಗದಲ್ಲಿರುವ ದೈವಿ ಶಕ್ತಿಯೇ ಗಾಯತ್ರಿ. ಚೈತನ್ಯವನ್ನು ನೀಡಿ ಸಂರಕ್ಷಿಸಲೆಂದು ಗಾಯತ್ರಿ ಮಂತ್ರದ ಮುಖೇನ ನಾವು ಪರಬ್ರಹ್ಮನನ್ನು ಪ್ರಾರ್ಥಿಸುತ್ತ ಅಂದರೆ ಪದದ ಅರ್ಥ ಪ್ರಾಣವನ್ನು ಸತತವು ಸಂರಕ್ಷಿಸುವುದು ಅಂತುಹುದು ಎಂದಾಯಿತು. ಗಾಯತ್ರಿ ಮಂತ್ರವು ತುರಿಯಾ ಸ್ಥಿತಿಗೆ ತಲುಪುತ್ತದೆ. ಎಲ್ಲಾ ಮಂತ್ರಗಳ ಕೆಲಸ ಗಾಯತ್ರಿ ಮಂತ್ರ ಮಾಡುತ್ತದೆ.
- ಅನಿಲ್ ಎಸ್. ಪಿ. ರೈಕರ್ (ಅಂಕಣಕಾರರು)

