ಡಾ . ಪಿ. ದಯಾನಂದ ಪೈ ದಂಪತಿಗಳು ಸೆಪ್ಟೆಂಬರ್ 13 ಆದಿತ್ಯವಾರ, 2026 (ಗಣೇಶ ಚತುರ್ಥಿಯ ಮುನ್ನಾ ದಿನ..)
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿರುವ ” ವಯೋ ವಂದನ ಆತಿಥ್ಯ*ಗೃಹ ಕಟ್ಟಡ” ನಿರ್ಮಾಣ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಜಿಎಸ್ಬಿ ಸಮಾಜ ಹಿತರಕ್ಷಣ ವೇದಿಕೆಯ ಪದಾಧಿಕಾರಿಗಳು ಮತ್ತು ವಯೋವಂದನ ಆತಿಥ್ಯಗೃಹ ನಿರ್ಮಾಣ ಯೋಜನೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಡಾ. ಪೈ ದಂಪತಿಗಳನ್ನು ಆದರರಿಂದ ಬರಮಾಡಿಕೊಂಡು, ಕಟ್ಟಡ ನಿರ್ಮಾಣ ಕಾಮಗಾರಿಯ ಕಾರ್ಯ ಪ್ರಗತಿಯ ವಿವರಗಳನ್ನು ನೀಡಿದರು. ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆಯ ಮಹತ್ವಾಕಾಂಕ್ಷೆಯ ಈ ಯೋಜನೆಯ ಯಶಸ್ಸಿಗಾಗಿ ವೇದಿಕೆಯ ಸರ್ವ ಪದಾಧಿಕಾರಿಗಳು ಅಹೋರಾತ್ರಿ ಪ್ರಯತ್ನಿಸುತ್ತಿದ್ದು. ಸಮಾಜ ಬಾಂದವರು ಸಹ ಅವರೋದಿಗೆ ಕೈಜೋಡಿಸಿದರೆ ಈ ಮಹಾಕಾರ್ಯ ನಿಗದಿತ ಸಮಯಕ್ಕಿಂತ ಮುಂಚೆಯೇ ಪೂರ್ಣವಾಗಿ ಅದೆಷ್ಟೋ ಜನರಿಗೆ ಆಶ್ರಯ ನೀಡಲು ಸಜ್ಜಾಗಲಿದೆ.

