ಜಿ.ಎಸ್.ಬಿ. ಸಮಾಜ ಹಿತರಕ್ಷಣಾ ವೇದಿಕೆ (ರಿ) ಉಡುಪಿ ಜಿಲ್ಲೆ ಹಾಗೂ ಸಮರ್ಪಣ ಚಾರಿಟೇಬಲ್ ಟ್ರಸ್ಟ್, ಮುದರಂಗಡಿ (ರಿ) ಸಹಯೋಗದಲ್ಲಿ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ನಿಧಿ -೨೦೨೬-೨೭ ವತಿಯಿಂದ ಜಿ.ಎಸ್.ಬಿ. ಸಮಾಜ ಬಾಂದವರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಹಾಗೂ ಪ್ರತಿಭಾವಂತರಿಗೆ ಸತ್ಕರಿಸುವ ಸಮಾರಂಭವು ದಿನಾಂಕ. ೨೦ನೇ ಸೆಪ್ಟೆಂಬರ್ ೨೦೨೬ (ಭಾನುವಾರ) ದಂದು ಅಮೃತ್ ಗಾರ್ಡನ್ ಆಡಿಟೋರಿಯಂ, ಅಂಬಾಗಿಲು, ಉಡುಪಿ. ಇಲ್ಲಿ ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಕಾರ್ಯಕ್ರಮದ ವೇಳಾಪಟ್ಟಿಯಂತೆ ಬೆಳಿಗ್ಗೆ ೯:೩೦ ರಿಂದ ೧೧:೦೦ ಘಂಟೆಯ ತನಕ ಉದ್ಘಾಟನಾ ಸಮಾರಂಭವು ನಡೆಯಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸಿಎ ಎಸ್.ಎಸ್ ನಾಯಕ್ ಸಂಸ್ಥಾಪಕರು, ಎಸ್.ಎಸ್.ನಾಯಕ್ ಮತ್ತು ಅಸೋಸಿಯೇಟ್ಸ್, ಮಂಗಳೂರು ಇವರು ವಹಿಸಲಿದ್ದಾರೆ. ಉದ್ಘಾಟಕರಾಗಿ ಶ್ರೀ ಎಂ ಕೃಷ್ಣ ಹೆಗ್ಡೆ ಮಿಯಾರ್ ಟ್ರಸ್ಟಿ, ಭಂಡಾರಿ ಫೌಂಡೇಶನ್ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು ಇವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಸುದರ್ಶನ್ ಆರ್ ಪೈ, ಮಾಜಿ ಲೆಫ್ಟಿನೆಂಟ್ ಕಮಾಂಡರ್, ಭಾರತೀಯ ನೌಕಾಪಡೆಇವರು ಉಪಸ್ಥಿತರಿರುವರು.
ಮಧ್ಯಾಹ್ನ ೧೧:೦೦ – ೧:೦೦ ತನಕ ಶೈಕ್ಷಣಿಕ ಪ್ರೇರಕ ಅಧಿವೇಶನ ನಡೆಯಲಿದೆ. ಇದರಲ್ಲಿ ಸಿಎ ಗೋಪಾಲ ಕೃಷ್ಣ ಭಟ್
ಸಂಸ್ಥಾಪಕರು ಮತ್ತು ಸಿಇಒ, ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಡಾ.ವೃಂದಾ ಗಿರಿಧರ್ ಕಾಮತ್
ಪ್ರೊಫೆಸರ್ ಮತ್ತು ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಮುಖ್ಯಸ್ಥ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮಂಗಳೂರು, ಶ್ರೀ ಓಂ ಗಣೇಶ್ ಕಾಮತ್ ಅಂತರಾಷ್ಟ್ರೀಯ ಜಾದೂಗಾರ, ಬರಹಗಾರ ಮತ್ತು ಭಾಷಣಕಾರ ಇವರೆಲ್ಲರೂ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ೨.೩೦ ರಿಂದ “ಆಭರಣ ಪ್ರತಿಭಾ ಪುರಸ್ಕಾರ” ಮತ್ತು ವಿದ್ಯಾರ್ಥಿ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಶ್ರೀ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್ ಅನಂತ ವೈದಿಕ ಕೇಂದ್ರ, ಉಡುಪಿ ಇವರು ವಹಿಸಲಿದ್ದಾರೆ. ಶ್ರೀ ಸತ್ಯೇಂದ್ರ ಪೈ ಇನ್ವೆಂಜರ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

