

E-Book Link : http://”5343″][/dflip
ವಸಂತನನ್ನೂ ಋತುಗಳ ರಾಜ ಎಂದು ಕರೆಯುತ್ತಾರೆ, ಭಗವಾನ ಶ್ರೀ ಕೃಷ್ಣ ಪರಮಾತ್ಮರು ಋತುಗಳಲ್ಲಿಯೇ ಶ್ರೇಷ್ಠವಾದ ವಸಂತ ಋತುವಿನಲ್ಲಿ ನಾನು ಇರುತ್ತೇನೆ ಎಂದು ಭಗವದ್ಗೀತೆಯಲ್ಲಿ ಘೋಷಿಸಿದ್ದಾರೆ. ವಸಂತ ಋತು ಇಷ್ಟೊಂದು ಶ್ರೇಷ್ಠವೆನ್ನಲು ಕಾರಣವೆಂದರೆ ಚೈತ್ರ ಮತ್ತು ವೈಶಾಖ ಮಾಸಗಳು ಬೇಸಿಗೆಯ ಮಧ್ಯ ಭಾಗದಲ್ಲಿ ಬಂದರೂ ಪ್ರಕೃತಿಯಲ್ಲಿ ಅಮೋಘ ಬದಲಾವಣೆಯನ್ನು ತರುವ ಕಾಲ. ತಾವೆಲ್ಲರೂ ವಸಂತ ಋತುವಿನ ಚಿತ್ರವನ್ನು ಗಮನಿಸಿರಬಹುದು. ಮರ, ಗಿಡಗಳಲ್ಲಿ ಹಸಿರು ಚಿಗುರು ಕಂಡು ಬರುತ್ತವೆ. ಕೆಲವೊಮ್ಮೆ ಎಳೆಯ ಚಿಗುರುಗಳೇ ಹೂವುಗಳೆಂಬ ಭ್ರಾಂತಿಯೂ ಉಂಟಾಗುತ್ತದೆ. ದುಂಬಿಗಳ, ಹಕ್ಕಿಗಳ ಹಾರಾಟ ಮನಕ್ಕೆ ಸಂತಸ ನೀಡುತ್ತದೆ. ಇದು ಪ್ರಕೃತಿಯ ನವೀಕರಣವೆನ್ನುವಂತೆ ಬಾಸವಾಗದಿರದು. ಹಳೆಬೇರು ಹೊಸ ಚಿಗುರಿಗಳಿಂದ ವೃಕ್ಷಮಾತೆ ಸಂತೃಪ್ತತೆಯನ್ನು ಹೊಂದಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಿಂದ ಸಡಗರದಿಂದ ನಿಸರ್ಗಮಾತೆಯೇ ಹುಚ್ಚೆದ್ದು ಕುಣಿಯುತ್ತಿರುವಂತೆ ಕಾಣಿಸುತ್ತದೆ. ರೈತರು ಕಟಾವು ಮಾಡಿ ಧಾನ್ಯಗಳನ್ನು ಸಂಗ್ರಹಿಸಿಟ್ಟು ಸಂತೃಪ್ತಿ ಹೊಂದುತ್ತಾರೆ. ಇದರಿಂದ ಪ್ರಕೃತಿ ಮಾತೆಗೂ ನೆಮ್ಮದಿ. ಇಂಥಹ ಸಂದರ್ಭದಲ್ಲಿಯೇ ನಿಸರ್ಗದ ಹೊಸವರ್ಷವನ್ನು ಸೂಚಿಸುವ ಯುಗಾದಿಯಂತಹ ಹಬ್ಬಗಳು ಬರುತ್ತವೆ. ಭೂಮಂಡಲದ ಪ್ರತಿಯೊಂದು ಜೀವ-ಜಂತುಗಳಲ್ಲಿ ಹೊಸತನದ ಕಂಪು, ನಾವೀನ್ಯತೆ, ಸಡಗರವನ್ನು ತುಂಬುವ ವಸಂತ ಋತುವನ್ನು ಋತುಗಳ ರಾಜನೆಂದು ಕರೆಯುತ್ತಾರೆ. ಎಲ್ಲೆಡೆಯೂ ಮದುವೆ, ಮುಂಜಿಯಂತಹ ಧಾರ್ಮಿಕ ಕಾರ್ಯಕ್ರಮಗಳ ಯಥೇಚ್ಚವಾಗಿ ನಡೆಯುವುದರೊಂದಿಗೆ ದೇವಸ್ಥಾನಗಳಲ್ಲಿ ಜಾತ್ರೆ, ಉತ್ಸವ, ರಥೋತ್ಸವಗಳು ನಡೆಯುತ್ತಿರುವ ಸಂಭ್ರಮದ ಕಾಲ. ಸಾಂಸ್ಕೃತಿಕ ಸುಗ್ಗಿಗೂ ಕೊರತೆ ಇರುವುದಿಲ್ಲ. ಯಕ್ಷಗಾನ ಮೇಳಗಳ ತಿರುಗಾಟ, ನಾಟಕ, ನೃತ್ಯ, ರಸಮಂಜರಿಗಳು ಎಲ್ಲೆಡೆಯೂ ನಡೆಯುತ್ತಲೇ ಇರುತ್ತವೆ. ಪ್ರಕೃತೀ ಮಾತೆಯ ಸಡಗರದಲ್ಲಿ ಮನುಷ್ಯನೂ ಸಹ ಪಾಲ್ಗೊಂಡು ಸಂತೋಷ, ಸಂಭ್ರಮ, ಆನಂದ ಪಡುವ ಕಾಲ. ಇದರಲ್ಲಿ ಸರಸ್ವತಿ ಪಂಚಮಿಯೊಂದಿಗೆ ಜ್ಞಾನದ ಅಧಿದೇವತೆ ಸರಸ್ವತಿ ಮಾತೆಯ ಕೃಪೆಯೂ ಕಲೆಯ ರೂಪದಲ್ಲಿ ವೀಕ್ಷಿಸುವಾಗ ದೊರಕುವ ಆನಂದ ಅಕ್ಷರಗಳಿಂದ ವಿವರಿಸುವಂತದ್ದಲ್ಲ.

ವಸಂತ ಮಾಸದ ಸವಿ ಮತ್ತು ಔಚಿತ್ಯವನ್ನು ಗೌಡ ಸಾರಸ್ವತರೆಲ್ಲರಿಗೂ ಧಾರ್ಮಿಕತೆಯ ಸಂಬಂಧದೊಂದಿಗೆ ದಿವ್ಯ ಉಡುಗೊರೆಯಾಗಿ ನೀಡಿದವರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಅನ್ನುವುದನ್ನು ನಾವು ಮರೆಯುವಂತಿಲ್ಲ.
ಶ್ರೀ ಸಂಸ್ಥಾನ ಕಾಶೀಮಠದ ೨೦ನೇ ಯತಿವರ್ಯರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ತಪಸ್ವಿಗಳು, ಮಹಾಮಹಿಮರು, ಇವರ ವಾಣಿ ದೇವವಾಣಿ ಆ ಕಾರಣದಿಂದ ಇವರನ್ನು ಶಿಷ್ಯವೃಂದ ಮಾತನಾಡುವ ದೇವರು ಎಂದೇ ಕರೆಯುತ್ತಿದ್ದರು. ಇಂದಿಗೆ ಸರಿಯಾಗಿ ೧೦೦ ವರ್ಷಗಳ ಹಿಂದೆ ೧೯೨೬ರ ಮಾರ್ಚ್ ೩೧ರಂದು ಕೇರಳದಲ್ಲಿ ಜನ್ಮತಾಳಿ, ೧೯೪೯ರ ಜುಲೈ ೨೨ರಂದು ಶ್ರೀ ಕಾಶೀಮಠದ ೨೦ನೇ ಯತಿವರ್ಯರಾಗಿ ಸರ್ವಜ್ಞ ಪೀಠವೇರಿ ೨೦೧೬ರ ತನಕ ಅಖಂಡ ೬೭ ವರ್ಷಗಳ ಕಾಲ ಶ್ರೀ ಕಾಶೀಮಠದ ಆಡಳಿತದ ಚುಕ್ಕಾಣಿ ಹಿಡಿದು, ದೇಶಾದ್ಯಂತ ಸಂಚರಿಸಿ ಎಲ್ಲಡೆಯೂ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂದವರಲ್ಲಿ ಸಂಘಟನೆ, ಧಾರ್ಮಿಕ ಜಾಗೃತಿ, ಸೌಹಾರ್ದತೆಯನ್ನುಂಟುಮಾಡಿ ಪವಾಡವೆನ್ನುವಂತಹ ಹಲವಾರು ಕಾರ್ಯಗಳನ್ನು ಸಂಪನ್ನಗೊಳಿಸಿದ್ದಾರೆ. ಮಠದ ಆರಾಧ್ಯ ದೇವರಾದ ಶ್ರೀ ವ್ಯಾಸ ರಘುಪತಿ, ನರಸಿಂಹ ದೇವರ ಪೂಜೆಯ ಸಂದರ್ಭದಲ್ಲಿ ದೇವಪೂಜೆಯಲ್ಲಿ ಲೀನರಾಗಿ ಸಮಯದ ಪರಿವೇ ಇಲ್ಲದೇ ಬಾಹ್ಯ ಜಗತ್ತನ್ನೇ ಮರೆಯುತ್ತಿದ್ದರು. ಪೀಠಾಧಿಕಾರಿಗಳಾಗಿದ್ದ ಅಷ್ಟೂ ಕಾಲ ತಮ್ಮ ಕಠಿಣ ತಪ-ಜಪಾರಾಧನೆಗಳ ಸಂಪೂರ್ಣ ಫಲವನ್ನು ಮಠದ ಶಿಷ್ಯಕೋಟಿಗೆ ಸಮರ್ಪಿಸಿ ಶ್ರೀಮದ್ ಸುಧೀಂದ್ರ ತೀರ್ಥರು ಭಕ್ತಕೋಟಿಯ ಮನದಲ್ಲಿ ಅಜರಾಮರರಾಗಿದ್ದಾರೆ. ಅಪಾರ ಪವಾಡಗಳನ್ನೂ ಮೆರೆದಿದ್ದಾರೆ.

ವಸಂತ ಋತುವಿನ ಪ್ರಕೃತಿಯ ಅಪಾರ ಸಂತೋಷ, ಸಂಭ್ರಮ, ಸಡಗರದಲ್ಲಿ ಶಿಷ್ಯರೆಲ್ಲರೂ ಒಟ್ಟಾಗಿ ಪಾಲ್ಗೊಳ್ಳಲು ಸಮಾಜದ ಪ್ರತಿಯೋರ್ವರನ್ನೂ ಆಮಂತ್ರಿಸಿ, ಆಶೀರ್ವದಿಸಲು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಆರಂಭಿಸಿದ ವಿಸ್ಮಯದ, ವೈಭವದ ಪರಂಪರೆಯೇ ಶ್ರೀ ಕಾಶೀ ಮಠಾಧೀಶರ `ವಸಂತೋತ್ಸವ
ಸಾಧು ಸಂತರ ಚಾತುರ್ಮಾಸ ವ್ರತದ ಬಗ್ಗೆ ಎಲ್ಲರಿಗೂ ತಿಳಿದಿದೆ. ಭಾರತದಾದ್ಯಂತದ ಪ್ರತಿಯೋರ್ವ ಹಿಂದೂ, ಜೈನ ಸನ್ಯಾಸಿಗಳು, ಸಂತರು ಸಹ ಚಾತುರ್ಮಾಸ ವ್ರತವನ್ನು ಆಚರಿಸುತ್ತಾರೆ. ಇದಕ್ಕೆ ಧಾರ್ಮಿಕ, ವೈಜ್ಞಾನಿಕ ಹಿನ್ನೆಲೆಯೂ ಇದೆ. ಆದರೆ ವಸಂತೋತ್ಸವನ್ನು ಆಚರಿಸುವವರು ಶ್ರೀ ಕಾಶೀಮಠಾಧೀಶರು ಮಾತ್ರ. ಇದರ ಸಂಭ್ರಮ ಚಾತುರ್ಮಾಸಕ್ಕಿಂತ ಹೆಚ್ಚಿನದೆಂದರೂ ಅತಿಶಯೋಕ್ತಿ ಆಗಲಾರದು. ಇತ್ತೀಚೆಗೆ ಶ್ರೀ ಕಾಶೀಮಠಾಧೀಶರ ವಸಂತೋತ್ಸವು ದೇಶ-ವಿದೇಶಗಳಲ್ಲಿಯೂ ಹೆಸರುವಾಸಿಯಾಗಿದೆ. ನಿರಂತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಿಂದೂ ಧರ್ಮ, ಸಂಸ್ಕೃತಿಯ ಪುನರಜ್ಜೀವನಕ್ಕೂ ವಸಂತೋತ್ಸವವು ಕಾರಣೀಭೂತವಾಗುತ್ತಿದೆ.

ಬೇಡಿದ್ದನ್ನು ನೀಡುವ ಕಲಿಯುಗದ ಕಲ್ಪವೃಕ್ಷ, ಕಲಿಯುಗದ ಜೀವಂತ ದೇವರು ಎನಿಸಿಕೊಂಡಿರುವ ಏಳು ಬೆಟ್ಟಗಳ ಮೇಲೆ ನಿಂತು ಭಕ್ತಿ-ಶೃದ್ಧೆಯಿಂದ ಬೇಡಿ ಬರುವ ಕೋಟ್ಯಾನುಗಟ್ಟಲೆ ಭಕ್ತರನ್ನು ಪೊರೆಯುವ ತಿರುಮಲದ ಶ್ರೀ ವೆಂಕಟರಮಣ ಸ್ವಾಮಿ ಯಾರಿಗೆ ಗೊತ್ತಿಲ್ಲ? ತಿರುಮಲದಲ್ಲಿ ಪ್ರತಿ ವರ್ಷ ನವರಾತ್ರಿಯ ಸಂದರ್ಭದಲ್ಲಿ ನಡೆಯುವ ಬ್ರಹ್ಮೋತ್ಸವವು ವಿಶ್ವವಿಖ್ಯಾತ. ಹತ್ತಾರು ಲಕ್ಷ ಜನರು ತಿರುಮಲದಲ್ಲಿ ಸೇರುವ ದಿವ್ಯ ಕ್ಷಣ. ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ನಡೆಯುವಂತೆ ಬ್ರಹ್ಮೋತ್ಸವ ಅಥವಾ ವಾಹನ ಸೇವೆಗಳು ಇತರೆಡೆಯೂ ಶ್ರೀ ವೆಂಕಟರಮಣ ಸ್ವಾಮಿಗೆ ನಡೆಯುತ್ತವೆ. ಆದರೆ ಅಪರೂಪದಲ್ಲಿ ಅಪರೂಪವೆನ್ನುವಂತೆ ಶ್ರೀ ಸಂಸ್ಥಾನ ಕಾಶೀಮಠದ ಆರಾಧ್ಯ ದೇವರಾದ ಶ್ರೀ ವ್ಯಾಸರಘುಪತಿ ನರಸಿಂಹ ದೇವರಿಗೆ ವಿವಿಧ ವಾಹನ ಸೇವೆಗಳು ನವರಾತ್ರಿಯಲ್ಲಿ ನಡೆದರೆ ವಿವಿಧ ವಾಹನ ಪೂಜೆಗಳು ಈ ವಸಂತೋತ್ಸವದ ಪರ್ವಕಾಲದಲ್ಲಿ ಸಂಪನ್ನಗೊಳ್ಳುತ್ತವೆ.
ಇದಕ್ಕೂ ಸಹ ಒಂದು ಇತಿಹಾಸವಿದೆ, ಶ್ರೀ ಕಾಶೀಮಠದಲ್ಲಿ ತಿರುಪತಿಯ ಮಾದರಿಯಲ್ಲಿ ಸೇವೆ ನಡೆಯುವುದಕ್ಕೂ ಹಾಗೂ ಗೌಡ ಸಾರಸ್ವತರು ಶ್ರೀ ವೆಂಕಟರಮಣ ಸ್ವಾಮಿಯನ್ನು ತಮ್ಮ ಇಷ್ಟ ದೇವರನ್ನಾಗಿ ಆಯ್ದು ಕೊಳ್ಳಲು ಮೂಲ ಕಾರಣ ೧೫ನೇ ಶತಮಾನದಲ್ಲಿ ಶ್ರೀ ವಿಜಯೇಂದ್ರ ತೀರ್ಥರೆಂದು ಪ್ರಸಿದ್ಧರಾಗಿದ್ದ ಮಹಾಮಹಿಮಾತೀತರಾಗಿದ್ದ ಯತಿಶ್ರೇಷ್ಠ ಶ್ರೀ ವಿಷ್ಣುತೀರ್ಥರು ಎಂಬ ಅಭಿಪ್ರಾಯವನ್ನು ಸಂತ ಶ್ರೇಷ್ಠರಾದ ಸಂತಶ್ರೀ ಭದ್ರಗಿರಿ ಅಚ್ಯುತದಾಸರು ಬರೆದಿದ್ದಾರೆ. ವಿಷ್ಣುತೀರ್ಥರನ್ನು ವಿದ್ಯಾನಿಧಿ ತೀರ್ಥರೆಂದೂ ಕರೆಯುತ್ತಿದ್ದರಂತೆ. ಅದಕ್ಕೊಂದು ಐತಿಹಾಸಿಕ ಐತಿಹ್ಯವೂ ಇದೆ. ೧೫ನೇ ಶತಮಾನದಲ್ಲಿ ಆಗಿನ ವಿಜಯನಗರದ ದೊರೆ ರಾಜಾ ಸಾಳುವ ನರಸಿಂಹ ನಾಯಕನಿಗೂ ಹಾಗೂ ತಿರುಪತಿಯ ಅರ್ಚಕರಿಗೂ ಮಧ್ಯೆ ಬಂದ ಸಂಘರ್ಷದ ಕಾರಣದಿಂದ ಅಖಂಡ ಹದಿನಾರು ವರ್ಷಗಳಷ್ಟು ಸುದೀರ್ಘ ಕಾಲ ಶ್ರೀ ವೆಂಕಟರಮಣ ಸ್ವಾಮಿಗೆ ಪೂಜೆಗೈಯುವ ಭಾಗ್ಯ ಶ್ರೀ ವಿಷ್ಣುತೀರ್ಥರಿಗೆ ಲಿಭಿಸಿತಂತೆ. ನಂತರ ಶ್ರೀ ಗುರು ಆದೇಶದಂತೆ ಶ್ರೀ ವೆಂಕಟರಮಣ ಸ್ವಾಮಿಯ ಪೂಜೆಯನ್ನು ಅರ್ಚಕರ ವಂಶದವರಿಗೆ ಬಿಟ್ಟುಕೊಟ್ಟು ಹಿಂತಿರುವಾಗ ಶ್ರೀ ವಿಷ್ಣು ತೀರ್ಥರ ಮೈಮನಗಳಲ್ಲಿ ಆವರಿಸಿದ್ದ ಕಲಿಯುಗದ ಕಾಮಧೇನು ಶ್ರೀ ವೆಂಕಟರಮಣ ಸ್ವಾಮಿಯು ಒಂದು ಬಾವಿಯಲ್ಲಿ ಪಂಚಲೋಹದ ಮೂರ್ತಿಯಲ್ಲಿ ಇವರಿಗೆ ದರ್ಶನ ನೀಡಿದರಂತೆ, ತಮ್ಮ ಜೀವನ ಪಾವನವಾಯಿತೆಂದು ಶ್ರೀ ವಿಷ್ಣು ತೀರ್ಥರು ಆ ವೆಂಕಟರಮಣ ಮೂರ್ತಿಯನ್ನು ತಂದು ಅದನ್ನೇ ಶೃದ್ಧಾ-ಭಕ್ತಿಯಿಂದ ಪೂಜಿಸುತ್ತಿರುವಾಗ ಕೊಚ್ಚಿಯ ಜಿ.ಎಸ್.ಬಿ. ಸಮಜದ ವಿನಂತಿಯಂತೆ ಆ ವೆಂಕಟರಮಣನ ಮೂರ್ತಿಯನ್ನು ಅವರ ಆರಾಧನೆಗೆ ಸಂತೋಷದಿಂದ ನೀಡಿದರಂತೆ. ಅದನ್ನು ಕೊಚ್ಚಿಯಲ್ಲಿ ಪ್ರತಿಷ್ಟಾಪಿಸಿದ ಶ್ರೀ ವಿಷ್ಣು ತೀರ್ಥರು ತಿರುಪತಿಯ ವೈಭವವನ್ನು ಕೊಚ್ಚಿಯ ಆ ಮಂಗಳಮೂರ್ತಿಗೂ ಅರ್ಪಿಸಿ ಕೃತಾರ್ಥರಾದರಂತೆ. ಅಲ್ಲಿಂದ ಶ್ರೀ ವೆಂಕಟರಮಣ ಸ್ವಾಮಿ ಗೌಡ ಸಾರಸ್ವತರ ಇಷ್ಟದೇವರಾದರು. ಅವರೇ ಶ್ರೀ ವಿಜಯತೀರ್ಥರೆಂದು ನಾಮಾಭಿದಾನ ಪಡೆದು ಶ್ರೀ ಕಾಶೀಮಠದ ಪ್ರಥಮ ಯತಿವರ್ಯರಾದ ಶ್ರೀಮದ್ ಯಾದವೇಂದ್ರ ತೀರ್ಥರಿಗೆ ಪ್ರಸಿದ್ಧ ಶ್ರೀ ಕಾಶೀ ಕ್ಷೇತ್ರದಲ್ಲಿ ಸನ್ಯಾಸ ಹಾಗೂ ಪ್ರಣವಮಂತ್ರೋಪದೇಶ ನೀಡಿದವರು. ಶ್ರೀ ಸಂಸ್ಥಾನ ಕಾಶೀ ಮಠದ ಸ್ಥಾಪನೆಗೆ ಕಾರಣರಾದವರು. ಆ ಕಾರಣದಿಂದಲೇ ನವರಾತ್ರಿಯ ಸಂದರ್ಭದಲ್ಲಿ ಶ್ರೀ ಸಂಸ್ಥಾನದ ಕಾಶೀಮಠದ ಆರಾಧ್ಯ ದೇವರಿಗೆ ತಿರುಪತಿಯ ಪರಂಪರೆಯಂತೆ ವಾಹನಸೇವೆಗಳು ನಡೆಯುತ್ತವೆ.

ವಸಂತ ಮಾಸದಲ್ಲಿ ಯುಗಾದಿಯ ಮರುದಿವಸದಿಂದಲೇ ಅಶ್ವ ವಾಹನ ಪೂಜೆಯೊಂದಿಗೆ ಮೋದಲ್ಗೊಂಡು ವಾಹನಪೂಜೆ ಆರಂಭವಾಗಿ ಐರಾವತ, ಶೇಷ, ಬೆಳ್ಳಿಯ ಗರುಡ, ಹಂಸ, ಹನುಮಂತ, ರಥ, ಸ್ವರ್ಣ ಗರುಡ, ಪಾಲಕಿ, ಸೂರ್ಯ ವಾಹನ ಪೂಜೆಗಳು ವಿಜೃಂಭಣೆಯಿಂದ ನಡೆಯುತ್ತವೆ. ನಿಜಕ್ಕೂ ಲಕ್ಷಾಂತರ ಶೃದ್ಧಾಳುಗಳನ್ನು ತಿರುಮಲಕ್ಕೆ ಸೂಜಿಗಲ್ಲಿನಂತೆ ಆಕರ್ಷಿಸುವ ಈ ಪರಂಪರೆ ಶ್ರೀ ಕಾಶೀಮಠದಲ್ಲಿಯೂ ನಡೆಯುವುದು ಗೌಡ ಸಾರಸ್ವತರ ಮಹಾಭಾಗ್ಯವೆಂದರೆ ಅತಿಶಯೋಕ್ತಿಯಾಗಲಾರದು.
ಅಲ್ಲದೇ ವಸಂತಮಾಸದಲ್ಲಿ ಮತ್ತೊಂದು ವೈಶಿಷ್ಟ್ಯಪೂರ್ಣ ಸಂಗತಿಯೂ ಅಡಕವಾಗಿದೆ. ಶ್ರೀ ಕಾಶೀಮಠ ಸಂಸ್ಥಾನಕ್ಕೆ ಶ್ರೀ ಕಾಶೀಮಠದ ಆರಾಧ್ಯ ದೇವರು ಶ್ರೀ ವ್ಯಾಸ ರಘುಪತಿ ನರಸಿಂಹ ದೇವರು. ಶ್ರೀ ಕಾಶೀಮಠಾಧೀಶರ ವಸಂತೋತ್ಸವದ ಸಂದರ್ಭದಲ್ಲಿಯೇ ಈ ಮೂರು ದೇವರ ಜಯಂತಿಯೂ ಸಹ ಬರುವುದು ವಸಂತೋತ್ಸವದ ಮತ್ತೊಂದು ವೈಶಿಷ್ಟ, ಚೈತ್ರ ಶುಕ್ಲ ನವಮಿಗೆ ಶ್ರೀ ರಾಮಚಂದ್ರ ದೇವರ ಜನ್ಮದಿವಸ, ರಾಮನವಮಿಯಾದರೆ, ವೈಶಾಖ ಶುಕ್ಲ ತ್ರಯೋದಶಿಗೆ ಶ್ರೀ ವ್ಯಾಸಜಯಂತಿ, ಅದರ ಮರುದಿವಸವೇ ವೈಶಾಖ ಶುಕ್ಲ ಚತುರ್ದಶಿಯಂದು ನರಸಿಂಹ ಜಯಂತಿ. ಇದೊಂದು ಯೋಗಾಯೋಗವೇ ಅಲ್ಲವೇ?
ಎಲ್ಲರಿಗೂ ಗೊತ್ತಿರುವಂತೆ ಚಾತುರ್ಮಾಸದಲ್ಲಿ ಆಚರಿಸಿದಂತೆ ವಸಂತೋತ್ಸವದಲ್ಲಿ ಆಹಾರ ಸೇವನೆಗೆ ಕಾಲಕ್ಕನುಗುಣವಾದ ಆಹಾರ ಸೇವನೆ ಬಿಟ್ಟರೆ ಬೇರೆ ಯಾವುದೇ ವಿಶೇಷ ನಿಯಮವಿರುವುದಿಲ್ಲ. ಹಣ್ಣುಗಳ ರಾಜ ಮಾವಿನ ಹಣ್ಣಿನೊಂದಿಗೆ ಇತರ ಹಲವಾರು ಹಣ್ಣುಗಳು ಯಥೇಚ್ಛವಾಗಿ ದೊರಕುವ ಕಾಲ, ಅದರಂತೆ ವಿಧವಿಧದ ಪುಷ್ಪಗಳು, ಅವುಗಳನ್ನು ಶ್ರೀ ಮಠದ ದೇವರಿಗೆ ಅರ್ಪಿಸುವ ಪರಿಯಂತು ನಯನ ಮನೋಹರ. ಅಲ್ಲದೇ ಆ ಸಮಯದಲ್ಲಿ ಶ್ರೀ ಮಠದ ಅನುಯಾಯಿಗಳ ಮನೆಯಲ್ಲಿಯೂ ವಿಧವಿಧದ ಹೂಗಳು ಬಿಟ್ಟಿರುತ್ತವೆ. ಅಂತಹ ಪತ್ರ-ಪುಷ್ಪಗಳನ್ನು ಮಾಲೆಕಟ್ಟಿ ತಂದು ದೇವರಿಗೆ ಅರ್ಪಿಸಿ, ಆ ಹೂಮಾಲೆಗಳು ಮಠದ ದೇವರ ಮಂಟಪವೇರಿ ಕುಳಿತಾಗ ಆಗುವ ತೃಪ್ತಿ, ಧನ್ಯತೆ ಬಹುಶಃ ಪದಗಳಲ್ಲಿ ವಿವರಿಸಲಾರದಂತಹದ್ದು.
ಇಷ್ಟೆಲ್ಲ ವೈಶಿಷ್ಟ್ಯ, ವೈವಿಧ್ಯಮಯವಾದ ಶ್ರೀ ಕಾಶೀ ಮಠಾಧೀಶರ ವಸಂತೋತ್ಸವ ಆರಂಭವಾಗಿದ್ದು ಯಾವಾಗ ಎಂದು ಪ್ರಶ್ನಿಸಿದರೆ ಬಹುಪಾಲು ಜನ ನೂರಾರು ವರ್ಷಗಳಾಗಿರ ಬಹುದೆಂದು ನಂಬಿರಬಹುದು. ಆದರೆ ಲಭ್ಯ ದಾಖಲೆಗಳ ಪ್ರಕಾರ ಶ್ರೀ ಕಾಶೀ ಮಠಾಧೀಶರ ವಸಂತೋತ್ಸವವು ಪ್ರಪ್ರಥಮವಾಗಿ ಆರಂಭವಾಗಿದ್ದು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಕಾಲದಲ್ಲಿ ಅಂದರೆ ೧೯೭೨ರಲ್ಲಿ. ಶ್ರೀ ಕಾಶೀಮಠಾಧೀಶರ ಪ್ರಪ್ರಥಮ ವಸಂತೋತ್ಸವವು ನಡೆದಿದ್ದು ಈಗಿನ ಉಡುಪಿ ಜಿಲ್ಲೆಯ ಕೋಟಾದಲ್ಲಿ. ಅದಕ್ಕೂ ಒಂದು ಹಿನ್ನೆಲೆ ಕೋಟಾದಲ್ಲಿ ಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ೩೦-೧೦-೧೯೫೩ರಲ್ಲಿ ವರುಣತೀರ್ಥ ಗೌಡಸಾರಸ್ವತ ಬ್ರಾಹ್ಮಣ ಸೇವಾಸಂಘವನ್ನು ಸ್ಥಾಪಿಸಿದರು. ಆದರೆ ೧೯೫೩ರ ನಂತರ ಕೋಟಾದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ನಡೆದಿರಲಿಲ್ಲ, ಆದರೆ ಕೋಟದ ಶಿಷ್ಯಕೋಟಿಯಿಂದ ಶ್ರೀ ಮಠಕ್ಕೆ ಅಧಿಕ ಸೇವೆ ಸಲ್ಲಿಸ ಬೇಕೆಂಬ ಬಯಕೆಯಿಂದ ಅಲ್ಲೊಂದು ಚಾತುರ್ಮಾಸ ನೀಡಬೇಕೆಂಬ ಬೇಡಿಕೆ ನಿರಂತರವಾಗಿ ಬರುತ್ತಲೇ ಇತ್ತು, ಆದರೆ ಬಹುವರ್ಷಗಳ ಚಾತುರ್ಮಾಸ ವ್ರತ ಬೇರೆ ಬೇರೆ ಕಡೆ ಪೂರ್ವ ನಿರ್ಧಾರಿತವಾಗಿರುವುದರಿಂದ ಅದು ಸಾಧ್ಯವಿರಲಿಲ್ಲ. ಕೋಟ್ ಶಿಷ್ಯವೃಂದಕ್ಕೆ ನಿರಾಶೆಯಾಗ ಬಾರದೆಂದು ೧೯೭೨ರಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಕೋಟ ವರುಣತೀರ್ಥ ಶ್ರೀ ಮುರಳೀಧರ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಚೈತ್ಯ, ವೈಶಾಖದಲ್ಲಿ ಶ್ರೀ ರಾಮನವಮಿ, ಶ್ರೀ ಹನುಮಜ್ಜಯಂತಿ, ಶ್ರೀ ವ್ಯಾಸ ಜಯಂತಿ, ಶ್ರೀ ನರಸಿಂಹ ಜಯಂತಿಯನ್ನು ಆಚರಿಸಿ `ವಸತಿಯಾನ ಎಂದು ವೈಶಾಖ ಪೂರ್ಣಿಮೆಯ ತನಕ ವಾಸ್ತವ್ಯ ಉಳಿದರು. ಕೊನೆಗೆ ವಿಜೃಂಭಣೆಯ ದಿಗ್ವಿಜಯವೂ ಸಹ ನಡೆಯಿತು. ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಂದ ಈ ರೀತಿಯಲ್ಲಿ ಶ್ರೀ ಮಠದ ವಸಂತೋತ್ಸವಕ್ಕೆ ನಾಂದಿಯಾಯಿತು. ಮುಂದೆ ಅದೇ ನಿಯಮಿತವಾಗಿ ಚೈತ್ರ, ವೈಶಾಖ ಮಾಸಗಳಲ್ಲಿ ವಸಂತೋತ್ಸವವೆಂದು ಪ್ರಖ್ಯಾತವಾಗಿ ಶ್ರೀ ಕಾಶೀ ಮಠ ಪರಂಪರೆಯ ವಿಸ್ಮಯದಲ್ಲಿ ಸೇರಿಕೊಂಡಿತು. ಈಗಿನ ಪೀಠಾಧಿಪತಿಗಳಾದ ಶ್ರೀಮದ ಸಂಯಮೀಂದ್ರ ತೀರ್ಥರು ಸಹ ಆ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
೨೦೨೬ರಲ್ಲಿ ಮಾರ್ಚ್ ೧೯ಕ್ಕೆ ಪರಾಭವ ನಾಮ ಸಂವತ್ಸರ ಆರಂಭವಾಗುತ್ತದೆ. ಅಂದೇ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಈ ಸಂವತ್ಸರದ ವಸಂತೋತ್ಸವವು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದಲ್ಲಿರುವ ಶ್ರೀ ಅನಂತನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆರಂಭವಾಗಲಿದೆ.
೧೯೯೩ರ ಜುಲೈ ೬ರಂದು ದಿ| ಜಿ.ಎಸ್. ಕಾಮತ್, ಯು. ಜಯಂತ ಕಿಣಿ, ಶ್ರೀನಿವಾಸ ಬಿ. ಪೈ, ಸುಮನ ಜಿ. ಭಟ್, ಲಕ್ಷ್ಮಣ ರಂಗಪ್ಪ ಕಾಮತ್, ಎ.ಎಮ್. ಹೆಗಡೆ, ಎಮ್.ಎನ್.ಬಾಳಿಗಾರೆಂಬ ಸಪ್ತರ್ಷಿಗಳು ಸೇರಿ ಬೆಂಗಳೂರಿನಲ್ಲಿ ಗೌಡ ಸಾರಸ್ವತರಿಗಾಗಿಯೇ ನಿರ್ಮಿಸಿದ ಬಡಾವಣೆಯೇ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರವಿರುವ ಶ್ರೀ ಅನಂತನಗರ. ಈ ಸೊಸೈಟಿಯನ್ನು ನೋಂದಾಯಿಸಿ ನಂತರ ೬೦ ಎಕರ ಜಮೀನನ್ನು ಖರೀದಿಸಿ ೮೮೮ ನಿವೇಶನಗಳನ್ನು ಅಭಿವೃದ್ಧಿಪಡಿಸಿ, ಸಮಾಜದವರಿಗೆ ಹಂಚಿ ಶ್ರೀ ಅನಂತನಗರಕ್ಕೊಂದು ಅಸ್ತಿತ್ವವನ್ನು ದಯಪಾಲಿಸಿದರು. ಇಲ್ಲಿ `ಶ್ರೀ ವೆಂಕಟರಮಣ ದೇವಸ್ಥಾನದ ಪ್ರತಿಷ್ಠೆಯು ೨೦೦೩ರಲ್ಲಿ ಆಯಿತು. ಅಲ್ಲಿಂದ ಇಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ತ್ರಿಕಾಲ ಪೂಜೆ, ಅಭಿಷೇಕಗಳು, ವಿಶೇಷ ದಿವಸ ಹಾಗೂ ಹಬ್ಬ ಹರಿದಿನಗಳಲ್ಲಿ ಉತ್ಸವಗಳು ಧಾರ್ಮಿಕ ವಿಧಿ-ವಿಧಾನಗಳು ಜರಗುತ್ತಿರುತ್ತವೆ. ಇಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯೊಂದಿಗೆ ಪರಿವಾರ ದೇವರಾಗಿ ಶ್ರೀ ಮಹಾಲಕ್ಷ್ಮೀ, ಶ್ರೀ ಗರುಡ ದೇವರು, ಶ್ರೀ ಗಣಪತಿ ದೇವರು, ಶ್ರೀ ಹನುಮಂತ ದೇವರು ಹಾಗೂ ಶ್ರೀ ಚಪ್ಪರ ವಿನಾಯಕ ದೇವರು ಇದ್ದಾರೆ. ಇಲ್ಲಿ ಶ್ರೀ ರಾಮನವಮಿ ಉತ್ಸವ, ಪ್ರತಿಷ್ಠಾ ವರ್ಧಂತಿ ಉತ್ಸವ, ಶ್ರೀ ಗಣೇಶ ಚೌತಿ ಉತ್ಸವ, ಶ್ರೀ ಅನಂತ ನೋಂಪಿ ಉತ್ಸವ, ಗಣಹೋಮ, ನಾಗಾಭಿಷೇಕ, ಅಮವಾಸೆಗೆ ವಿಶೇಷ ಪೂಜೆ, ಪಿತೃ ಪಕ್ಷದಲ್ಲಿ ತರ್ಪಣ, ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಿಯಮಿತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಬೆಂಗಳೂರಿನ ಶ್ರೀ ಅನಂತನಗರದ ಈ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿಯೇ ಈ ವರ್ಷದ ಶ್ರೀ ಸಂಸ್ಥಾನ ಕಾಶೀ ಮಠಾಧೀಶರ ವಸಂತೋತ್ಸವವು ನಡೆಯಲಿದೆ. ತತ್ಸಂಬಂಧ ೨೦೨೬ರ ಮಾರ್ಚ್ ೧೩ರಂದು ಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಪುರಪ್ರವೇಶ ಮಾಡಲಿದ್ದಾರೆ. ಅಂದು ಅವರನ್ನು ವಿಶೇಷ ರಥದಲ್ಲಿ ಕುಳ್ಳಿರಿಸಿ, ಪೂರ್ಣಕುಂಭ ಸಹಿತ ಸ್ವಾಗತಿಸಲಾಗುವುದು.
ಕಳೆದ ಹಲವಾರು ವರ್ಷಗಳಿಂದ ಶ್ರೀ ದೇವಸ್ಥಾನದಲ್ಲಿ ನಿಯಮಿತವಾಗಿ ಶ್ರೀ ಸತ್ಯನಾರಾಯಣ ವ್ರತ ಪೂಜೆಯು ನಡೆಯುತ್ತಿದ್ದು ೨೦೦ನೇ ತಿಂಗಳ ಶ್ರೀ ಸತ್ಯನಾರಾಯಣ ವ್ರತವು ಪೂಜ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ೨೦೨೬ರ ಮಾರ್ಚ್ ೧೫ರಂದು ನೇರವೇರಲಿದೆ. ಈ ವರ್ಷ ಮಾರ್ಚ್ ೧೯ರಂದು ಹಿಂದುಗಳ ಹೊಸ ವರ್ಷದ ಸಂಭ್ರಮ ದೇಶದೆಲ್ಲೆಡೆ ನಾನಾ ಹೆಸರಿನಿಂದ ನಡೆಯುತ್ತಿರುವಾಗ ಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥರು ಶ್ರೀ ಅನಂತನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪರಾಭವ ಅಥವಾ ಪ್ರಭಾವ ನಾಮ ಸಂವತ್ಸರದ ಶ್ರೀ ವಸಂತೋತ್ಸವವನ್ನು ಆರಂಭಿಸಲಿದ್ದಾರೆ. ಯುಗಾದಿಯ ದಿವಸ ಪಟ್ಟದ ದೇವರಿಗೆ ತೈಲಾಭಿಷೇಕ, ಪವಮಾನಾಭಿಷೇಕ, ಪಂಚಮೃತಾಭಿಷೇಕ ನಡೆಯಲಿರುವುದು. ಅಂದೇ ಪೂಜ್ಯರ ಅಮೃತ ಹಸ್ತದಿಂದ ದೀಪ ಪ್ರಜ್ವಲನೆಯ ಮೂಲಕ ಶ್ರೀ ಅನಂತನಗರದ ಶ್ರೀ ವೆಂಕಟರಮನ ದೇವಸ್ಥಾನದಲ್ಲಿ ತೃತೀಯ ವರ್ಷದ `ಭಜನಾ ಉತ್ಸವವು ಆರಂಭವಾಗಲಿದೆ. ಅಂದು ತೊಟ್ಟಿಲ ವಾಹನ ಪೂಜೆಯೊಂದಿಗೆ ವ್ಯಾಸರಘಪತಿ ದೇವರ ವಿಶೇಷ ಅಲಂಕೃತ ತೊಟ್ಟಿಲ ವಾಹನಾಲಂಕಾರ ಪೂಜೆ ನಡೆಯಲಿದೆ.
ಮಾರ್ಚ್ ೨೦ರಂದು ದೇವರ ಅಶ್ವ ವಾಹನಾಲಂಕಾರ ಪೂಜೆ ನಡೆಯಲಿದೆ. ಆ ಮೂಲಕ ಕುದುರೆಯು ಓಡುವಷ್ಟು ವೇಗದಲ್ಲಿ ಪರಿಸರದ ನಕಾರಾತ್ಮಕ ಶಕ್ತಿಯು ನಾಶವಾಗಿ ಅಲ್ಲಿ ಅಪಾರ ಸಕಾರಾತ್ಮಕ ಶಕ್ತಿ ಸಂಚಯವಾಗುವುದೆಂಬ ನಂಬಿಕೆ ಇದೆ. ಮಾರ್ಚ್ ೨೧ರಂದು ಐರಾವತ ವಾಹನಾಲಂಕಾರ ಪೂಜೆಯು ನಡೆಯುತ್ತದೆ. ಅದರಿಂದ ಪ್ರತಿಯೊಬ್ಬರಿಗೂ ಅದೃಷ್ಟ ಮತ್ತು ಐಶ್ವರ್ಯಜೊತೆಯಲ್ಲಿ ಪ್ರಾಪ್ತಿಯಾಗುವುದೆಂಬ ನಂಬಿಕೆ ಇದೆ. ಪರಮಾತ್ಮುನು ಆದಿಶೇಷನ ಮೇಲೆ ಪವಡಿಸಿ ಯಾವಾಗಲೂ ಅವನಿಗೆ ತನ್ನ ಸಾನಿಧ್ಯ ಭಾಗ್ಯವನ್ನು ಕರುಣಿಸುವಂತೆ ಶೃದ್ಧಾವಂತ ಭಕ್ತರೊಂದಿಗೆ ಪರಮಾತ್ಮನು ಇರುವನೆಂದು ನಂಬಿ ಮಾಡುವ ಶೇಷ ವಾಹನಾಲಂಕಾರ ಪೂಜೆಯು ಮಾರ್ಚ್ ೨೨ಕ್ಕೆ ಸಂಪನ್ನವಾದರೆ ಮಾರ್ಚ್ ೨೩ಕ್ಕೆ ಬೆಳ್ಳಿಯ ಗರುಡ ವಾಹನಾಲಂಕಾರ ಪೂಜೆಯು ನಡೆಯುತ್ತದೆ. ಶ್ರೀ ಗರುಡ ಶ್ರೀ ವಿಷ್ಣು ಪರಮಾತ್ಮನ ವಾಹನ ಹಾಗೂ ಶ್ರೀ ವಿಷ್ಣುವಿನ ಅತ್ಯಾಪ್ತ ಭಕ್ತ. ಆದ್ದರಿಂದ ಭಕ್ತರು, ಶೃದ್ಧೆಯಿಂದ ಬೆಳ್ಳಿಯ ಗರುಡ ವಾಹನ ಪೂಜೆಯಲ್ಲಿ ಭಾಗವಹಿಸುವುದರಿಂದ ಪಾಪನಾಶವಾಗುವುದೆಂಬ ನಂಬಿಕೆ ಇದೆ. ಮಾರ್ಚ್ ೨೫ರಂದು ಯುಗಾದಿಯಂದು ಆರಂಭವಾಗುವ ತೃತೀಯ ವರ್ಷದ ಭಜನಾ ಉತ್ಸವದ ಮಂಗಲ ಹಾಗೂ ಹನುಮಂತ ವಾಹನಾಲಂಕಾರ ಪೂಜೆಯು ನಡೆಯಲಿವೆ. ಹನುಮಂತನು ಭಗವಾನ ಶ್ರೀ ಭಗವಾನ ಶ್ರೀ ರಾಮಚಂದ್ರ ದೇವರ ನಿಷ್ಠಾವಂತ ಸೇವಕ ಮತ್ತು ಆತನನ್ನು ಸಂಕಟ ಮೋಚನನೆಂದೂ ನಂಬುತ್ತಾರೆ.
ಈ ವಾಹನ ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಭಕ್ತರಲ್ಲಿ ನಿಸ್ವಾರ್ಥತೆ, ದೇವರ ಮೇಲೆ ನಿಷ್ಠ್ಠೆ, ಭಕ್ತಿ ಮತ್ತು ಸೇವಾ ಭಾವನೆ ಉತ್ತೇಜನಗೊಳ್ಳುವುದೆಂದು ನಂಬಿಗೆ ಇದೆ. ರಥ ಅನ್ನುವುದು ಮತ್ತೊಬ್ಬರ ಸೇವೆಯ ಸಲುವಾಗಿ ಇರುವ ಸಾಧನಾ. ರಥವೆಂದರೆ ಈ ಭೌತಿಕ ಶರೀರ, ಅದರೊಳಗಿರುವ ರಥಿಕ ನಮ್ಮೊಳಗಿನ ಆತ್ಮ, ಅವನು ಪರಮಾತ್ಮಾನ ಅಂಶ. ರಥೋತ್ಸವದ ಸಂದೇಶ ಸಹ ಇದೇ. ಇದನ್ನು ಅರಿತುಕೊಳ್ಳುವ ಸಲುವಾಗಿ ರಥ ವಾಹನಾಲಂಕಾರ ಪೂಜೆಯನ್ನು ನಡೆಸುತ್ತಾರೆ. ಮಾರ್ಚ್ ೨೬ ರಂದು ರಥ ವಾಹನಾಲಂಕಾರ ಪೂಜೆ ನಡೆದರೆ ಮಾ. ೨೭ ಶ್ರೀ ರಾಮನವಮಿಯ ಸಂಭ್ರಮ, ಮಾತ್ರವಲ್ಲ ಅಂದು ವಿಶೇಷವಾಗಿ ರಾಮರಕ್ಷಾ ಹವನ, ಬಂಡಿ ಉತ್ಸವ ಮತ್ತು ವಿಶೇಷ ಪಾಲಕೀ ಉತ್ಸವವು ನಡೆಯುತ್ತದೆ. ಅದರೊಂದಿಗೆ ಸ್ವರ್ಣ ಗರುಡ ವಾಹನಾಲಂಕಾರ ಪೂಜೆಯೂ ನಡೆಯುತ್ತದೆ. ಸ್ವರ್ಣ ಸರ್ವ ಶ್ರೇಷ್ಠವಾದ ಲೋಹ, ಇದರಲ್ಲಿ ಆಸೀನರಾಗುವ ದೇವರನ್ನು ದರ್ಶಿಸುವುದರಿಂದ ಶೃದ್ಧಾವಂತ ಭಕ್ತರಿಗೆ ಆಧ್ಯಾತ್ಮಿಕ ಉನ್ನತಿ ಹಾಗೂ ಮೋಕ್ಷ ಪ್ರಾಪ್ತವಾಗುವದೆಂದು ಪ್ರತೀತಿ ಇದೆ.
ಭಕ್ತವೃಂದ ದೇವರಿಗೆ ಸಮರ್ಪಿತವಾಗಿದೆ ಎಂದು ತಿಳಿಸಲು ಮಾರ್ಚ್ ೨೮ರಂದು ಪಾಲಕೀ ವಾಹನಾಲಂಕಾರ ಪೂಜಾ ನಡೆದರೆ, ಸೂರ್ಯನಂತೆ ತೇಜಸ್ಸು, ಶಕ್ತಿ ಪ್ರಾಪ್ತಿಗೆ ಮತ್ತು ಸಮರ್ಪಣ ಭಾವನ ತೋರಿಸಲು ಮಾ. ೩೦ರಂದು ಸೂರ್ಯ ವಾಹನ ಪೂಜೆಯು ನಡೆಯುತ್ತದೆ. ಹಾಗೆಯೇ ಅಂದು ಸುಂದರಕಾಂಡ ಹವನವೂ ಆರಂಭವಾಗುತ್ತದೆ. ಮಾರ್ಚ್ ೩೧ರಂದು ಸುಂದರಕಾಂಡ ಹವನದ ಪೂರ್ಣಾಹುತಿಯು ನಡೆಯುತ್ತದೆ. ಇದರಲ್ಲಿ ಪಾಲ್ಗೊಂಡರೆ ಹನುಮಂತ ದೇವರ ಕೃಪೇಯಿಂದ ಧೈರ್ಯ, ಯಶ, ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗಿ ಕುಟುಂಬಾಂದೊಳಗಿನ ಕಲಹ ನಾಶವಾಗಿ ಮನೆಯಲ್ಲಿ ಸುಖ-ಶಾಂತಿ ನಲೆಸಿರುತ್ತದೆ ಎಂಬ ನಂಬಿಗೆ ಇದೆ.
ಎಪ್ರಿಲ್ ೪ರಂದು ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ನಕ್ಷತ್ರ ಗುರು ಸ್ಮರಣೆ, ಅವರ ೧೦೦ನೇ ವರ್ಷ ಪೂರ್ಣತಃ ವಿಶೇಷ ಕಾರ್ಯಕ್ರಮ, ಗುರುಗುಣಗಾನ ನಡೆಯುತ್ತದೆ.. ಎಪ್ರಿಲ್೧೦ರಂದು ನವಚಂಡಿಕಾ ಹವನ ಹಾಗೂ ದುರ್ಗಾ ನಮಸ್ಕಾರ ನಡೆದರೆ ೨೦೧ನೇ ಮಾಸಿಕ ಶ್ರೀ ಸತ್ಯನಾರಾಯಣ ವ್ರತವು ಎಪ್ರಿಲ್ ೧೨ರಂದು ಪೂಜ್ಯ ಸ್ವಾಮಿಜಿಯವರ ಸಾನಿಧ್ಯದಲ್ಲಿ ಜರುಗಲಿದೆ. ಅಂದೇ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವು ಸಂಪನ್ನವಾಗಲಿದೆ. ಅಕ್ಷಯ ತೃತೀಯದ ದಿವಸವಾದ ಎಪ್ರಿಲ್ ೧೯ರಂದು ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ನಡೆದರೆ, ಎಪ್ರಿಲ್ ೨೦ಕ್ಕೆ ಸಹಸ್ರ ಮೋದಕ ಹವನ ನಡೆದು, ಶ್ರೀಮದ್ ಭಾಗವತ ಸಪ್ತಾಹ ಹಾಗೂ ಶ್ರೀ ವೆಂಕಟೇಶ ಮಹಾತ್ಮೆ ಪಾರಾಯಣ ಕಾರ್ಯಕ್ರಮಗಳು ಆರಂಭವಾಗಲಿವೆ.
ಎಪ್ರಿಲ್ ೨೬ಕ್ಕೆ ವಿಜೃಂಭಣೆಯ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆದರೆ, ಎಪ್ರಿಲ್ ೨೯ರಂದು ಶ್ರೀ ವ್ಯಾಸಜಯಂತಿ ಪ್ರಯುಕ್ತ ಶ್ರೀ ವೇದವ್ಯಾಸ ದೇವರಿಗೆ ಪೂಜ್ಯ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ವಿಶೇಷ ಪೂಜೆ ಮಾಡಲಿದ್ದಾರೆ. ಎಪ್ರಿಲ್ ೩೦ರಂದು ಶ್ರೀ ನರಸಿಂಹ ಜಯಂತಿ ಮಾತ್ರವಲ್ಲ ಅಂದೇ ಬೆಂಗಳೂರು ಶ್ರೀ ಅನಂತನಗರದ ಶ್ರೀ ವೆಂಕಟರಮಣ ಸ್ವಾಮಿ ಮತ್ತು ಪರಿವಾರ ದೇವರ ೨೩ನೇ ವರ್ಷದ ಪ್ರತಿಷ್ಟಾ ವರ್ಧಂತಿ ಉತ್ಸವಗಳೂ ನಡೆಯಲಿವೆ. ತತ್ಸಂಬಂಧ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ವೆಂಕಟರಮಣ ಸ್ವಾಮಿಗೆ ಪವಮಾನ ಅಭಿಷೇಕ, ಶತಕಲಶಾಭಿಷೇಕ ಹಾಗೂ ವಿಶೇಷ ಪೂಜೆ, ಅನ್ನಸಂತರ್ಪಣೆಯೂ ನಡೆಯಲಿದೆ. ಇದರೊಂದಿಗೆ ವಾರಾಂತ್ಯದಲ್ಲಿ ಹಾಗೂ ವಿಶೇಷ ದಿವಸಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವಸಂತೋತ್ಸವದಲ್ಲಿ ಪೂಜ್ಯ ಸ್ವಾಮೀಜಿಯವರ ಹಾಗೆಯೇ ಶ್ರೀ ವ್ಯಾಸರಘುಪತಿ ನರಸಿಂಹ ಮತ್ತು ಶ್ರೀ ವೆಂಕಟರಮಣ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಬರುವ ಸಮಾಜ ಬಾಂದವರಿಗೆ ಪ್ರತಿ ದಿವಸ ಉಟೋಪಚಾರದ ವ್ಯವಸ್ಥೆ ಇದ್ದು. ವಸಂತೋತ್ಸವಕ್ಕೆ ದೂರದಿಂದ ಬರುವವರು ವಾಸ್ತವ್ಯಕ್ಕಾಗಿ ವಸಂತೋತ್ಸವ ಸಮಿತಿಯನ್ನು ಸಂಪರ್ಕಿಸಿದರೆ ಯೋಗ್ಯದರದಲ್ಲಿ ಹತ್ತಿರದ ವಸತಿಗ್ರಹಗಳಲ್ಲಿ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಿಕೊಳ್ಳ ಬಹುದು. ವಸತಿ ಹಾಗೂ ವಸಂತೋತ್ಸವದ ಸಮಯದಲ್ಲಿ ನಡೆಯುವ ವಿವಿಧ ಸೇವೆಗಳ ಸಲುವಾಗಿ ಹಾಗೆಯೇ ಈ ಸಂದರ್ಭದಲ್ಲಿ ಭಾಗವಹಿಸಿ ಭಜನಾ ಸೇವೆಯನ್ನು ಸಲ್ಲಿಸಲು ಇಚ್ಛೆ ಇದ್ದವರು ಕೆಳಗೆ ನೀಡಿದ ಮೊಬೈಲ್ ನಂಬರಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳ ಬಹುದು. ಕೊರಯೇತ.
೧. ಸೇವಾ ಬುಕ್ಕಿಂಗ್ ಸಲುವಾಗಿ: ರಾಜಾರಾಮ ಕಾಮತ್ (ಮೊ : ೯೮೪೪೫೧೧೩೮೧, ಪ್ರಭಾಕರ ಕಿಣಿ (ಮೊ : ೯೪೮೦೩೬೧೫೬೦) ೨. ಭಜನಾ, ಸಾಂಸ್ಕೃತಿಕ ಕಾರ್ಯಾವಳಿ ಸಲುವಾಗಿ : ಅರ್ಲಾ ವತ್ಸಲಾ ಪ್ರಭು (ಮೊ : ೯೬೩೨೨೪೯೪೦೩), ಪ್ರೀತಿ ಶೆಣೈ (ಮೊ: ೯೩೪೩೩೨೯೯೪೯) ೩. ವಸತಿ ಮಾಹಿತಿಯ ಸಲುವಾಗಿ : ಸಂತೋಷ ಪ್ರಭು (ಮೊ : ೯೬೬೩೩೨೦೮೦೪) ದೀಪಾ ಪೈ (ಮೊ : ೮೯೭೦೦೯೪೩೭೯) ೪. ದೇವಸ್ಥಾನದ ಕಛೇರಿ : ೯೪೮೦೬೯೬೮೮೩.
ನೆಪ್ಟ್, ಅನ್‌ಲೈನ್ ಮುಖಾಂತರ ಹಣ ಕಳುಹಿಸಲು ಇಚ್ಛೆ ಇದ್ದವರು ಬೆಂಗಳೂರು ಅನಂತನಗರ ಶಾಖೆಯ ಯುನಿಯನ್ ಬ್ಯಾಂಕಿನ ಂ/ಛಿ. ಓo. ೨೫೭೦೧೨೦೧೦೦೦೦ ೫೮೪, IಈSಅ ಅoಜe : UಃIಓ೦೮೨೫೭೦೧, ಂ/ಛಿ. ಓಚಿme : ಉSಃ Weಟಜಿಚಿಡಿe ಂssoಛಿiಚಿಣioಟಿ ಗಿಚಿsಚಿಟಿಣhoಣhsಚಿv ಇಲ್ಲಿಗೆ ಕಳುಹಿಸಿ ಕೊಡಬಹುದು. ಮಾಹಿತಿಯನ್ನು ೯೪೮೦೬೯೬೮೮೩ ವಾಟ್ಸಪ್‌ಗೆ ಕಳುಹಿಸಿರಿ.
ವಸಂತೋತ್ಸವ ಸಮಿತಿ ೨೦೨೬
ಡಾ. ಪಿ. ದಯಾನಂದ ಪೈ, ಶ್ರೀ ಕೆ. ಉಪೇಂದ್ರ ನಾಯಕ್ (ಪೋಷಕ) ಶ್ರೀ ವೆಂಕಟೇಶ ಎಚ್. ಪ್ರಭು (ಅಧ್ಯಕ್ಷ), ಶ್ರೀ ಅರ್ಲಾ ಪ್ರಕಾಶ ಪ್ರಭು (ಕಾರ್ಯದರ್ಶಿ), ಶ್ರೀ ಎಮ್. ನರಸಿಂಹ ಶೆಣೈ (ಖಜಾಂಚಿ). ಸರ್ವಶ್ರೀ ರಾಘವೇಂದ್ರ ಪೈ ಎ., ರಾಮದಾಸ ಪ್ರಭು, ರಾಜಾರಾಮ ವಿ. ಕಾಮತ, ದೀಪಕ ಕಾಮತ, ಜಿ.ವಿ. ಆಚಾರ್‍ಯ(ಉಪಾಧ್ಯಕ್ಷ), ಸರ್ವಶ್ರೀ ನಿತೀನ ಶೆಣೈ ಟಿ., ಪ್ರಶಾಂತ ಕೆ. ಶೆಣೈ, ಶಿವಪ್ರಕಾಶ ಮಲ್ಯ, ಜಿ.ಎಸ್.ಎನ್. ಮಲ್ಲಾರ, ಗುರುರಾಜ ಪೈ (ಜೊತೆ ಕಾರ್ಯದರ್ಶಿ), ಶ್ರೀ ರಮೇಶ ಶೆಣೈ, ಶ್ರೀ ಯೋಗೀಶ ಶೆಣೈ(ಸಹ ಖಜಾಂಚಿ). ಸರ್ವಶ್ರೀ ಸಂತೋಷ ಪ್ರಭು, ಎ. ಸುಧೀರ ಪ್ರಭು, ರಾಜಾರಾಮ ಭಟ್, ಕೆ.ವಿ. ಭಾಗ್ವತ, ಚೇತನ ಶೆಣೈ, ಶಿವಪ್ರಸಾದ ನಾಯಕ, ಮಂಜುನಾಥ ಪ್ರಭು, ಭರತ ಪೈ, ರಾಮಕೃಷ್ಣ ಪ್ರಭು, ಪ್ರಭಾಕರ ಕಿಣಿ, ಅನಂತ ಭಟ್, ಮನೋಜ ಪ್ರಭು (ಸಮಿತಿ ಸದಸ್ಯ).
ಸರ್ವಶ್ರೀ ಶ್ರೀ. ಕೆ. ನಾರಾಯಣ ಶೆಣೈ, ಶ್ರೀ. ಬಿ. ರವಿಶಂಕರ ಪ್ರಭು, ಶ್ರೀ. ಜಿ.ಜಿ. ಶೆಣೈ, ಶ್ರೀ. ಯು.ವಿವೇಕಾನಂದ ನಾಯಕ್, ಶ್ರೀ. ಪುತ್ತೂರು ನರಸಿಂಹ ನಾಯಕ್, ಶ್ರೀ. ಶಂಕರ ಶಾನಭೋಗು, ಶ್ರೀ. ಜಿತೇಂದ್ರ ಭಟ್, ಶ್ರೀ ಟಿ ಸತೀಶ್ ಶೆಣೈ, ಶ್ರೀ. ರಾಮಚಂದ್ರ ಶೆಣೈ, ಶ್ರೀ ಎಸ್ ಎಸ್ ಪ್ರಭು, ಶ್ರೀ. ಅಶೋಕ್ ಕುಮಾರ್ ಕಿಣಿ, ಶ್ರೀ. ಸಾಲಿಗ್ರಾಮ ರವೀಂದ್ರ ನಾಯಕ್, ಶ್ರೀ. ಎಂ ಮಧುಕರ ಪ್ರಭು, ಶ್ರೀ. ಟಿ.ಎಲ್ ಪೈ, ಶ್ರೀ. ಕೆ ವಿವೇಕ್ ಶೆಣೈ, ಶ್ರೀ ಎಂ.ಸುಧೀಂದ್ರ ನಾಯಕ್, ಶ್ರೀ. ಅಣ್ಣಪ್ಪ ಪ್ರಭು, ಶ್ರೀ. ಉಮೇಶ್ ಶೆಣೈ ಬಿ.ವಿ., ಶ್ರೀ. ದಿನೇಶ್ ಭಟ್ ಎಂ., ಶ್ರೀ. ನರಸಿಂಹ ಶೆಣೈ, ಶ್ರೀ. ರಘುವೀರ್ ಶೆಣೈ, ಶ್ರೀ. ಜಿ ಪುರುಷೋತ್ತಮ ಪೈ, ಶ್ರೀ. ಸಂಗೀತ ಕಿಣಿ. (ಸಲಹಾ ಸಮಿತಿ)
ಸರ್ವಶ್ರೀ ನಾರಾಯಣ ಭಟ್, ಕೃಷ್ಣಾ ಭಟ್, ಕೌಶಿಕ ಭಟ್, ಸುರೇಶ ಭಟ್ (ಅರ್ಚಕ ವರ್ಗ)
ವಸಂತ ಋತುವಿನ ಈ ವೈಶಿಷ್ಟ್ಯಪೂರ್ಣ ಸಂದರ್ಭದಲ್ಲಿ ವಿಸ್ಮಯ ಭರಿತ ವಸಂತೋತ್ಸವದಲ್ಲಿ ಗೌಡ ಸಾರಸ್ವತ ಸಮಾಜದ ಪ್ರತಿಯೋರ್ವ ಶೃದ್ಧಾಳುಗಳೂ ಭಾಗವಹಿಸಿ ಹರಿ-ಗುರು ಕೃಪೆಯನ್ನು ಪಡೆದುಕೊಳ್ಳ ಬಹುದು.
ಈ ಲೇಖನವನ್ನು ಕೊಂಕಣಿಯಲ್ಲಿ ಓದಲು ಇದರೊಂದಿಗೆ ನೀಡಿರುವ ಇ-ಬುಕ್‌ನ ಲಿಂಕ್‌ನ್ನು ಒತ್ತಿರಿ

