
ದೈವಜ್ಞ ದರ್ಶನ ಕಾರ್ಯಕ್ರಮದ ಭಾಗವಾಗಿ ಮತ್ತು ಶ್ರೀ ಅಮೃತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಅಣ್ಣಿಗೇರಿ ಯ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಸರ್ಕಾರ, ಧಾರವಾಡ ಜಿಲ್ಲಾ ಪಂಚಾಯತ, ಆರೋಗ್ಯ ಇಲಾಖೆ ಹಾಗೂ ದೈವಜ್ಞ ಬ್ರಾಹ್ಮಣ ಅಕ್ಕಸಾಲಿಗ ಸಮಾಜ ಸೇವಾ ಸಂಸ್ಥೆ(ರಿ) ಅಣ್ಣಿಗೇರಿ ಮತ್ತು ಹುಬ್ಬಳ್ಳಿಯ ವಿಹಾನ್ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಮತ್ತು ಡಾ.ಗಣೇಶ. ಕೆ. ವೆರ್ಣೆಕರ ಇವರ ಸಾರಥ್ಯದಲ್ಲಿ ಉಚಿತ ತಜ್ಞ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಹೃದಯ ಮೌಲ್ಯಮಾಪನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪ.ಪೂ.ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ವಹಿಸಿ ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು ಎಂದು ಹೇಳಿದರು. ನಮ್ಮ ಸಮಾಜದಿಂದ ನಡೆಯುತ್ತಿರುವ ಉಚಿತ ಆರೋಗ್ಯ ಶಿಬಿರ ಶ್ಲಾಘನೀಯ ಕಾರ್ಯ ಎಂದು ತಮ್ಮ ಆಶೀರ್ವಾದದ ನುಡಿಗಳಲ್ಲಿ ಹೇಳಿದರು.

ಪಾವನ ಸಾನಿಧ್ಯ ಸ್ಥಾನವನ್ನು ಶ್ರೀ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳು ವಹಿಸಿದ್ದರು, ಅಣ್ಣಿಗೇರಿಯ ದಾಸೋಹ ಮಠಾದೀಶರಾದ ಶೋ.ಬ್ರ.ಸದ್ಗುರು ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಆರೋಗ್ಯವೆ ದೇವರು ಹಾಗೂ ಬಡವರ್ಗ ಶ್ರಮಿಕ ವರ್ಗ ಆರೋಗ್ಯದ ಅಲಕ್ಷತನ ಮಾಡದೆ ಇಂತಹ ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದು ಆರೋಗ್ಯ ಸಂಪತ್ತನ್ನು ಬೆಳಸಿಕೊಳ್ಳಬೆಕೆಂದು ತಿಳಿಸಿದರು.
ಮೌಲ್ಯಮಾಪನದ ಸಮಯದಲ್ಲಿ ಅನೇಕ ಹೃದಯ ಸಂಬಂಧಿ ಪ್ರಕರಣಗಳು, ವಿಶೇಷವಾಗಿ ಮಕ್ಕಳ ಹೃದಯ ಸಂಬಂಧಿ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಡಾ. ಗಣೇಶ್ ವೆರ್ಣೇಕರ್ ಮಾಹಿತಿ ನೀಡಿದರು ಮತ್ತು ಆ ಪ್ರಕರಣಗಳನ್ನು ಆಯುಷ್ಮಾನ್ ಭಾರತ್ ಮುಂತಾದ ವಿವಿಧ ಸರ್ಕಾರಿ ಯೋಜನೆಗಳ ಮೂಲಕ ವಿವಿಧ ರೀತಿಯ ಚಿಕಿತ್ಸೆಗಳ ಮೂಲಕ ನಿರ್ವಹಿಸಲಾಗುವುದು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಡಾ.ಅಶೋಕ ಅಗರವಾಲ, ಶ್ರೀ ಷಣ್ಮುಖ ಗುರಿಕಾರ, ಶ್ರೀ ಡಾ.ಅಭಿಮನ್ಯು ಮಾತನಾಡಿದರು. 600 ಕ್ಕಿಂತ ಹೆಚ್ಚು ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಮೂಳೆಚಿಕಿತ್ಸೆ, ದಂತ ಮತ್ತು ಕಣ್ಣು ಇತರ ವೈದ್ಯಕೀಯ ಪರೀಕ್ಷೆಗಳು ಅನುಭವಿ ತಜ್ಞರಿಂದ ತಪಾಸಣೆ ಮಾಡಲಾಯಿತು.ಉಚಿತ 2ಡಿ ಇಕೋ, ಇಸಿಜಿ ತಪಾಸಣೆ ಹಾಗೂ ಉಚಿತ ನೇತ್ರ ತಪಾಸಣೆ, ಉಚಿತ ಕನ್ನಡಕ (ಚಾಳೀಸು) ಹಾಗೂ ಹುಬ್ಬಳ್ಳಿಯ ವಿಕೆರ್ ಸೂಪರ್ ಸ್ಪೆಶಿಯಾಲಿಟಿ ಹಾಸ್ಪಿಟಲ್ ನ ಡಾ. ವಿವೇಕ ಎಸ್ ಪಾಟೀಲ M S (Artho)
ಅವರಿಂದ ಕೀಲು ನೋವು ಮಂಡಿ ನೋವು ಇದರ ಶಾಶ್ವತ ಪರಿಹಾರ ಕುರಿತು ಮಾಹಿತಿ ನೀಡಲಾಯಿತು. ಡಾ. ಮನೋಜ ಭಟ್ ಡೆಂಟಲ್ ಸರ್ಜನ್ ಅವರಿಂದ ಉಚಿತ ದಂತ ತಪಾಸಣೆ ನಡೆಸಲಾಯಿತು.
ಈ ಎಲ್ಲ ಉಚಿತ ತಜ್ಞ ವೈದ್ಯಕೀಯ ತಪಾಸಣಾ ಶಿಬಿರದ ಪ್ರಯೋಜನವನ್ನು ಅಣ್ಣಿಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸದುಪಯೋಗ ಪಡಿದುಕೊಂಡರು.
ದೈವಜ್ಞ ಬ್ರಾಹ್ಮಣ ಅಕ್ಕಸಾಲಿಗ ಸಮಾಜ ಸೇವಾ ಸಂಸ್ಥೆಯ ಅಣ್ಣಿಗೇರಿ ತಾಲೂಕ ಅಧ್ಯಕ್ಷರು, ಸಮಾಜ ಸೇವಕರು ಆದ ಶ್ರೀ ರವಿರಾಜ ವೆರ್ಣೇಕರ ಹಾಗೂ ಸಮಾಜದ ಯುವಕರು ಅಚ್ಚುಕಟ್ಟಾಗಿ ಶಿಬಿರ ಆಯೋಜಿಸಿದ್ದರು. ಆರೋಗ್ಯ ಮತ್ತು ಶಿಕ್ಷಣದಲ್ಲಿ ಮನುಕುಲಕ್ಕೆ ಬೆಂಬಲ ನಮ್ಮ ಅಣ್ಣಿಗೇರಿ ದೈವಜ್ಞ ಬ್ರಾಹ್ಮಣ ಅಕ್ಕಸಾಲಿಗ ಸಮಾಜ ಸಂಸ್ಥೆಯ ಪ್ರಮುಖ ಕಾಳಜಿ ಎಂದು ಶ್ರೀ ರವಿರಾಜ್ ವೆರ್ಣೇಕರ್ ಅವರು ತಿಳಿಸಿದರು.

