ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ನಗರದ ಎಂ.ಸಿ.ಸಿ. ಎ ಬ್ಲಾಕ್ ಶಾಖೆಯ ಆಶ್ರಯದಲ್ಲಿ ಶ್ರಾವಣ ಮಾಸದ ಶುಕ್ರವಾರದಂದು ಸಂಜೆ ಶ್ರೀ ವರಮಹಾಲಕ್ಷ್ಮೀ ವೃತ ಅತ್ಯದ್ಭುತವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು ಎಂದು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ ತಿಳಿಸಿದರು.
ಕಲಾಕುಂಚ ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಶ್ರೀಮತಿ ಪ್ರಭಾ ರವೀಂದ್ರರವರ ನೇತೃತ್ವದಿಂದ ಶ್ರೀದೇವಿ ಅಲಂಕಾರದಿಂದ ಎಲ್ಲಾ ಮುತ್ತೈದೆಯವರಿಗೆ ಅರಿಶಿಣ ಕುಂಕಮ ಇಟ್ಟು ಉಡಿ ತುಂಬಿ ಗೌರವಿಸಿದರು. ಮಹಿಳೆಯರು ಮಕ್ಕಳು ಸೇರಿ ಸರ್ವರೂ ಶ್ರೀಲಕ್ಷ್ಮೀ ಅಷ್ಟೋತ್ತರ, ಭಜನೆ ಹಾಡಿ ಶ್ರೀದೇವಿಗೆ ಆರತಿ ಬೆಳಗಿದರು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಎಲ್.ರಾಯ್ಕರ್, ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಸಮಿತಿ ಸದಸ್ಯರಾದ ಶ್ರೀಮತಿ ಸವಿತಾ ವಿಜಯ ಕೂಲಂಬಿ, ಶ್ರೀಮತಿ ಶಿಲ್ಪಾ ಉಮೇಶ್, ಶ್ರೀಮತಿ ಮುಕ್ತಾ ಶ್ರೀವಾಸಪ್ರಭು, ಶ್ರೀಮತಿ ಶಾರದಾ ಕೃಷ್ಣಪ್ರಭು, ಶ್ರೀಮತಿ ಪವಿತ್ರಾ ವಾಸುದೇವ ಎಲ್.ರಾಯ್ಕರ್, ಶ್ರೀಮತಿ ಪ್ರೇಮ ಮಹೇಶ್ವರಯ್ಯ, ಶ್ರೀಮತಿ ಮಮತಾ ಕೊಟ್ರೇಶ್ ಮುಂತಾದವರು ಉಪಸ್ಥಿತರಿದ್ದರು.

