

ಮೂಲತಃ ಉಡುಪಿಯವರಾದ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ರಂಗೋಲಿ ಕಲಾವಿದೆ ವೀಣಾ ಐತಾಳ್ ಇವರ ಕೈಯ್ಯಲ್ಲಿ ಅರಳಿರುವ ಪ್ರಧಾನ ಮಂತ್ರಿ ಮೋದೀಜಿಯವರ ಚಿತ್ರ , ಉಡುಪಿ ಶ್ರೀಕೃಷ್ಣ ಮಠಕ್ಕೆ ಮೋದಿಜಿ ಭೇಟಿ ಕೊಟ್ಟಾಗ ರಂಗೋಲಿ ಯಲ್ಲಿ ರಚಿಸಿದ ಚಿತ್ರ ನೀಡಿದ್ದರು , ದೆಹಲಿ ಕಚೇರಿಯಿಂದ ಇತ್ತೀಚಿಗೆ ಮೆಚ್ಚುಗೆ ಬಂದಿರುತ್ತದೆ , ಉಡುಪಿ ಶಿರೂರು ಮಠದ ಯತಿ ವರ್ಯರಾದ ಪರ್ಯಾಯ ಪೀಠವನ್ನು ಅಲಂಕರಿಸಿದ ಶ್ರೀ ಶ್ರೀ ಶ್ರೀ ವೇದ.ವರ್ಧನ ಸ್ವಾಮಿಗಳ ಚಿತ್ರ ರಚನೆ ಮಾಡಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದರು
ಈ ರಂಗೋಲಿಯ ಉದ್ದ 9 ಅಡಿ ಹಾಗೂ ಅಗಲ 3 ಅಡಿ.ಇದಕ್ಕೆ ತಗಲಿದ ಸಮಯ 30 ಗಂಟೆಗಳು.ಇವರ ರಂಗೋಲಿಗಳಲ್ಲಿ ಪ್ರಮುಖ ವಾಗಿ ದೇವಾನುದೇವತೆಗಳು, ಕಾಪು ಹಳೆ ಮಾರಿ ಅಮ್ಮ, ಹೊಸ ಮಾರಿ ಅಮ್ಮ, ಕರಾವಳಿಯ ಆಚಾರಣೆಯ ದೈವಾರಾಧನೆ,ಯಕ್ಷಗಾನ, ಮುಂತಾದ ರಂಗೋಲಿಗಳನ್ನು ಬಿಡಿಸಿದ್ದಾರೆ. , ಕಾಂತಾರ , ಶ್ರೀದೇವಿ , ಕಟೀಲ್ ದುರ್ಗಾ ಪರಮೇಶ್ವರಿ , ಕೊರಗಜ್ಜ ಸ್ವಾಮೀ , ಕೊಲ್ಲೂರು ದೇವಿ , ಮಂದಾರ್ತಿ ದುರ್ಗಾ ದೇವಿ , ದೇವಳದಲ್ಲಿ ನೆಡೆಯುವ ದುರ್ಗಾ ನಮಸ್ಕಾರ , ಬ್ರಹ್ಮಕಲಶ , ನಾಗ ಮಂಡಲ ಗಳಲ್ಲಿ ಬ್ರಹತ್ ರಂಗೋಲಿ ಚಿತ್ರ ರಚಿಸಿರುವ
ವೀಣಾ ಐತಾಳ್ ಇದುವರೆಗೂ 300 ಕ್ಕೋ ಅಧಿಕ ರಂಗೋಲಿಗಳನ್ನು ಬಿಡಿಸಿದ್ದಾರೆ.ಇವರು ಅನೇಕ ಕಡೆ ಸಂದರ್ಶನ ನೀಡಿದ್ದಾರೆ.ಹಾಗೂ ಅನೇಕ ಪತ್ರಿಕೆಗಳಲ್ಲಿ ಇವರ ರಂಗೋಲಿಗಳು ಪ್ರಕಟ ಗೊಂಡಿವೆ. ದೈಜೀ ವರ್ಲ್ಡ್ ಹಾಗೂ ನಮ್ಮ ಕುಡ್ಲ ಟಿವಿ ಚಾನಲ್ ಗಳಲ್ಲೂ ಇವರ ರಂಗೋಲಿ ಪ್ರಸಾರ ಗೊಂಡಿವೆ.
ಹಲವಾರು ದೇವಸ್ಥಾನ , ಸಂಘ ಸಂಸ್ಥೆಯವರು ಇವರನ್ನು ಇವರ ಕಲೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿದ್ದಾರೆ

