
19,೦೦೦ ಕ್ಕಿಂಂತ ಅಧಿಕ ಸದಸ್ಯರನ್ನು ಹೊಂದಿರುವ ಕಳೆದ 75 ವರ್ಷಗಳಿಂದ ಪರಿಸರದ ರೈತರ ಕಲ್ಯಾಣವನ್ನೇ ಬಯಸುತ್ತಾ ಬಂದಿರುವ ಕುಂದಾಪುರ ತಾಲೂಕಿನಲ್ಲಿಯೇ ಪ್ರಸಿದ್ಧ ಸಹಕಾರಿ ಸಂಘವಾಗಿರುವ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂಘದಲ್ಲಿ ನಿರ್ದೇಶಕರಗಿ ಸೇವೆ ಸಲ್ಲಿಸಿದವರಿಗೆ ಹಾಗೂ ೭೫ ಜನ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆಗ ನಡೆಯಿತು. ಆ ಸಂಬಂಧ ಸಹಕಾರಿ ಸಂಘದ ಹಿರಿಯ ಸದಸ್ಯರು ಹಾಗೂ ಸಂಘದ ಮಾಜಿ ನಿರ್ದೇಶಕರೂ ಆಗಿ ಸೇವೆ ಸಲ್ಲಿಸಿದ ಶ್ರೀ ಆರಗೋಡು ಕೃಷ್ಣರಾಯ ಶೆಣೈಯವರ ಸಹಕಾರಿ ಸೇವೆಯನ್ನು ಗುರುತಿಸಿ ದಿನಾಂಕ ೦೮-೧೨-೨೦೨೫ರಂದು ಹಳಿಹೊಳೆ ಗ್ರಾಮದ ಕೆಳಾಕೊಡ್ಲಿನಲ್ಲಿರುವ ಅವರ ಮನೆಗೆ ಹೋಗಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಶ್ರೀ ಶೆಣೈಯವರ ಸಹಕಾರಿ ಸೇವೆಯನ್ನು ಸ್ಮರಿಸಲಾಯಿತು.
ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ನಡೆದ ಈ ಹೃದಯಸ್ಪರ್ಶಿ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪ್ರದೀಪ ಯಡಿಯಾಳ, ಮಾಜಿ ಅಧ್ಯಕ್ಷರಾದ ಶ್ರೀ ಎ. ಬಾಲಚಂದ್ರ ಭಟ್, ಸಂಘದ ಜನರಲ್ ಮ್ಯಾನೇಜರ್ ಶ್ರೀ ಎ. ಮಂಜುನಾಥ ನಾಯ್ಕ, ಲೇಖಪಾಲ ಶ್ರೀ ಕೆ. ಸತೀಶ ಭಟ್, ಶ್ರೀ ಸಂದೀಪ ಶೆಣೈ ಹಾಗೂ ಶ್ರೀ ಕೃಷ್ಣರಾಯ ಶೆಣೈಯವರ ಬಂಧು-ಮಿತ್ರರು ಉಪಸ್ಥಿತರಿದ್ದರು.

