ಮಂಗಳ. ಫೆಬ್ರ 3rd, 2026
    a3eb9161 0c3d 494e badd 499c8e3271ff
    Spread the love


    ಕನ್ನಡ ನಾಡು-ನುಡಿ, ಸಾಹಿತ್ಯ, ನೆಲ-ಜಲ ಸಂಸ್ಕೃತಿ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯಾಗಿ ಪರಿವರ್ತನೆ ಮಾಡಿದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಬೆಳಗಾವಿಯ ನಾಗರಮುನ್ನೋಳಿಯ ಕವಿತ್ತಕರ್ಮಮಣಿ ಪೌಂಡೇಶನ್ ವತಿಯಿಂದ ಚೈತನ್ಯ ಶಿರೋಮಣಿ ಪುರಸ್ಕಾರ ರಾಜ್ಯ ಪ್ರಶಸ್ತಿಯನ್ನು ವಿತರಿಸಲಾಗಿದೆ ಎಂದು ಕವಿತ್ತಕರ್ಮಮಣಿ ಪೌಂಡೇಶನ್ ಸಂಸ್ಥಾಪಕರಾದ ಕವಿತ್ತಕರ್ಮಮಣಿ ತಿಳಿಸಿದ್ದಾರೆ.

    ಕಲಾಕುಂಚದ ನೂತನ ಅಧ್ಯಕ್ಷರಾಗಿ ವಾಸುದೇವ ಎಲ್.ರಾಯ್ಕರ್ ಆಯ್ಕೆ


    ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ೨೦೨೬-೨೮ನೇ ನೂತನ ಅಧ್ಯಕ್ಷರಾಗಿ ವಾಸುದೇವ ಎಲ್.ರಾಯ್ಕರ್ ರವರು ಇತ್ತೀಚೆಗೆ ನಡೆದ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ಮಾಡಿದರು.


    ಗೌರವ ಅಧ್ಯಕ್ಷರಾಗಿ ಕೆ.ಹೆಚ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಖಜಾಂಚಿಯಾಗಿ ಎಂ.ಎಸ್.ಪ್ರಸಾದ್, ಉಪಾಧ್ಯಕ್ಷರಾಗಿ ವಿಜಯ್‌ಕುಮಾರ್ ಶೆಟ್ಟಿ, ಸಮಿತಿ ಸದಸ್ಯರಾಗಿ ರಾಜಶೇಖರ್ ಬೆನ್ನೂರು, ಡಿ.ಹೆಚ್.ಚನ್ನಬಸಪ್ಪ, ಅಬ್ದುಲ್ ಸತ್ತಾರ್ ಸಾಹೇಬ್, ಶಾಂತಪ್ಪ ಪೂಜಾರಿ, ಎಸ್.ಶಿವನಪ್ಪ, ಕಛೇರಿ ಕಾರ್ಯದರ್ಶಿಯಾಗಿ ವಿ.ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ. ಈ ಮಹಾಸಭೆಗೆ ಕೆ.ಸಿ.ಉಮೇಶ್ ಸ್ವಾಗತ ಮಾಡಿ ನಿರೂಪಣೆ ಮಾಡಿದರು ಕೊನೆಯಲ್ಲಿ ಎಂ.ಎಸ್.ಪ್ರಸಾದ್ ವಂದಿಸಿದರು.


    ದಾವಣಗೆರೆಗೆ ಕರಾವಳಿ ಜಿಲ್ಲೆಗಳ ಆರಾಧನೆ ಕಲೆ ಯಕ್ಷಗಾನವನ್ನು ವೈಭವೀಕರಿಸಿದ ಶೆಣೈಯವರು ಅವಿರತವಾಗಿ ಶ್ರಮಿಸುತ್ತಿದ್ದು ಅವಕಾಶ ವಂಚಿತರಾದ ಸಾಧಕರನ್ನು ಗುರುತಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ರಂತರ ಕಠಿಣ ಪರಿಶ್ರಮದಿಂದ ನಾಲ್ಕು ದಶಕದ ಅಪಾರ ಜ್ಞಾನ, ಸಾಂಸ್ಕೃತಿಕ ಸಮಾಜವನ್ನು ಉಜ್ವಲಗೊಳಿಸುತ್ತಿರುವ ಇವರಿಗೆ ಮಹಾನ್ ಆಧ್ಯಾತ್ಮಿಕ ನಾಯಕ, ತತ್ವಜ್ಞಾ, ಚಿಂತಕ ಹಾಗೂ ವಿಶವ ಸನ್ಮಾಸಿ ಸ್ವಾಮಿ ವಿವೇಕಾನಂದರ ೧೬೩ನೇ ಜನ್ಮದಿನಾಚರಣೆ ಮಿತ್ಯ ಹಮ್ಮಿಕೊಳ್ಳಲಾದ ಈ ಸಮಾರಂಭದಲ್ಲಿ ಪ್ರಶಸ್ತಿ ಪಡೆದ ಶೆಣೈಯವರಿಗೆ ಕವಿತ್ತಕರ್ಮಮಣಿ ಪೌಂಡೇಶನ್ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.


    Spread the love

    ನಿಮ್ಮದೊಂದು ಉತ್ತರ

    ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

    error: Content is protected !!