
2025ರಲ್ಲಿ ಆನ್‌ಲೈನ್ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸರಸ್ವತಿ ಪ್ರಭಾ ಭಜನೋತ್ಸವವನ್ನು ಆಯೋಜಿಸಿ, ಯಶಸ್ವಿಗೊಳಿಸಿ, ಪಾರದರ್ಶಕವಾಗಿ ವಿಜೇತರನ್ನು ಆರಿಸಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ೧೦ ಸಮಾಧಾನಕರ ಬಹುಮಾನ ಸೇರಿ ಒಟ್ಟು ೧೩ ಜನ ವಿಜೇತರಿಗೆ ನಗದು ಬಹುಮಾನವನ್ನು ಹಂಚಿರುವ ಸರಸ್ವತಿ ಪ್ರಭಾವು ೨೦೨೫ನೇ ಸಾಲಿನಲ್ಲಿಯೂ ಮತ್ತೊಮ್ಮೆ
ಸರಸ್ವತಿ ಭಜನೋತ್ಸವ-೨೦೨೫ ವನ್ನು ಆಯೋಜಿಸಿದೆ. ಈ ವರ್ಷ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಸಹಿತ ಇತರ ಐದು ಸಮಾಧಾನಕರ ಬಹುಮಾನ ಸೇರಿ ಒಟ್ಟು ೮ ಜನರಿಗೆ ಬಹುಮಾನ ನೀಡಲಾಗುವುದು. ಅಲ್ಲದೇ ೧೦,೦೦೦ ಕ್ಕಿಂತ ಅಧಿಕ ವೀಕ್ಷಣೆ ಹೊಂದಿದ ವಿಡಿಯೋಗಳಿಗೆ ವಿಶೇಷ ಬಹುಮಾನವೂ ದೊರಕಲಿದೆ. ವಾಚಕರಿಂದ ಅಥವಾ ಯಾವುದೇ ಸಂಘ-ಸಂಸ್ಥೆ, ವ್ಯಾಪಾರಿ ಸಂಸ್ಥೆಗಳಿಂದ ಗಿಪ್ಟ್, ಗಿಪ್ಟ್ ವ್ಹೋಚರ, ಕಾಣಿಕೆಗಳು ಬಂದಲ್ಲಿ ಅವುಗಳನ್ನೂ ವಿಜೇತ ಸ್ಪರ್ಧಿಗಳಿಗೆ ನೀಡಲಾಗುವುದು. ಈ ಭಜನೋತ್ಸವದಲ್ಲಿ ಭಾಗವಹಿಸಲು ಯಾವುದೇ ರೀತಿಯ ಪ್ರವೇಶ ಶುಲ್ಕವಿರುವದಿಲ್ಲ.

ಈ ವರ್ಷದ ಭಜನೋತ್ಸವವನ್ನು ಇಂದಿಗೆ ೧೧೦ ವರ್ಷಗಳ ಹಿಂದೆ ಕುಂದಾಪುರ ತಾ|| ಆರ್‍ಗೋಡು ಎಂಬ ಕುಗ್ರಾಮದಲ್ಲಿ ಜನಿಸಿ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಖ್ಯಾತ ಯುಕ್ಷಗಾನ ಕಲಾವಿದ, ಯಕ್ಷಗುರು ದಿ. ಎ. ರಾಮಚಂದ್ರ ಶ್ಯಾನಭಾಗ ಅವರಿಗೆ ಅರ್ಪಿಸಲಾಗುತ್ತದೆ. ಯಕ್ಷಗಾನದ ಪ್ರತಿಯೋಂದ ಕ್ಷೇತ್ರದಲ್ಲಿಯೂ ಅಪಾರ ಅನುಭವ ಹೊಂದಿದ್ದ ಇವರು ಪೂರ್ತಿ ಐದು ದಶಕಗಳ ಕಾಲ ಯಕ್ಷಗಾನದೊಂದಿಗೆ ನಂಟು ಹೊಂದಿದ್ದರು.
ಈ ವರ್ಷದ ಭಜನೋತ್ಸವದಲ್ಲಿ ಭಾಗವಹಿಸುವವರು ೧೫ ಜುಲೈ ೨೦೨೫ರೊಳಗೆ ತಮ್ಮ ಹೆಸರು, ವಿಳಾಸ ಹಾಗೂ ವಾಟ್ಸಪ್ ಇರುವ ಮೊಬೈಲ್ ನಂಬರನ್ನು ವಾಟ್ಸಪ್ ಮೆಸೇಜ್‌ನ(ಸಂದೇಶದ) ಮೂಲಕ ಮೊಬೈಲ್ ನಂ. ೮೨೧೭೬ ೦೧೧೦೨ ಗೆ ಕಳುಹಿಸಿಕೊಡಬೇಕು. ನಾವು ಇವರ ಹೆಸರುಗಳನ್ನು ನೋಂದಾಯಿಸಿಕೊಂಡು ಕನಿಷ್ಟ ೨೫ ಸ್ಪರ್ಧಿಗಳು ನೋಂದಾಯಿಸಿದನಂತರ ಪ್ರತ್ಯೇಕ ವಾಟ್ಸಪ್ ಗ್ರೂಪ್ ರಚಿಸಿ ಭಜನಾ ವಿಡಿಯೋಗಳನ್ನು ಯಾವ ರೀತಿಯಲ್ಲಿ ಚಿತ್ರೀಕರಿಸಬೇಕು, ಯಾವಾಗ ಕಳುಹಿಸ ಬೇಕು, ಕೊನೆಯ ದಿನಾಂಕ ಯಾವುದು? ಅದರೊಂದಿಗೆ ಯಾವ ಮಾಹಿತಿಗಳನ್ನು ಕಳುಹಿಸಿ ಕೊಡಬೇಕು ಎಂಬಿತ್ಯಾದಿ ವಿವರಗಳನ್ನು ಎಲ್ಲರಿಗೂ ಒಮ್ಮೆಗೆ ವಾಟ್ಸಪ್‌ನಲ್ಲಿ ನೀಡಲಾಗುವದು. ಆ ನಂತರವಷ್ಟೇ ವಿಡಿಯೋ ಕಳುಹಿಸಿಕೊಟ್ಟರೆ ಸಾಕು.
- ೧೬ ವರ್ಷದ ಮೇಲ್ಪಟ್ಟ ಯಾರೇ ಬೇಕಾದರೂ ಈ ವರ್ಷದ ಭಜನೋತ್ಸವದಲ್ಲಿ ಭಾಗವಹಿಸ ಬಹುದು. 2. ಆದರೆ ಇದು ವ್ಯಕ್ತಿಗತ ಸ್ಪರ್ಧೆಯಾಗಿರುವುದರಿಂದ ಒಬ್ಬರೇ ಹಾಡಬೇಕು, ಯಾವುದೇ ಭಜನಾ ತಂಡದ ಕಲಾವಿದರು ಒಬ್ಬೊಬ್ಬರೇ ಬೇರೆ ಬೇರೆಯಾಗಿ ವೀಡಿಯೋಗಳನ್ನು ತಯಾರಿಸಿ ಕಳುಹಿಸಿ ಕೊಡಬಹುದು. 3. ಸ್ಪರ್ಧಿಗಳು ಭಜನೆಯನ್ನು ಹಾಡುವಾಗ ಕೇವಲ ಹಾರ್‍ಮೋನಿಯಂ ಹಾಗೂ ತಾಳವನ್ನು ಮಾತ್ರ ಬಳಸ ಬೇಕು. 4. ಕನ್ನಡದ ಭಜನೆಗಳನ್ನ ಮಾತ್ರ ಚಿತ್ರೀಕರಿಸಿ ಕಳುಹಿಸಲು ಅವಕಾಶವಿದೆ. 5. ಈ ವರ್ಷದ ಭಜನೋತ್ಸವದಲ್ಲಿ ದಾಸರ ಪದದೊಂದಿಗೆ ಶರಣರ ವಚನಗಳಿಗೂ ಅವಕಾಶವಿದೆ. 6. ಭಜನೆ ಅಥವಾ ವಚನಗಳು ಕನಿಷ್ಟ 4 ನಿಮಿಷದಿಂದ ಗರಿಷ್ಟ 7 ನಿಮಿಷಗಳೊಳಗೆ ಇರಬೇಕು. 7 ಭಜನೋತ್ಸವಕ್ಕೆ ಆಯ್ಕೆಯಾದ ಭಜನಾ ವಿಡಿಯೋಗಳನ್ನು ಹೆಚ್ಚೆಚ್ಚು ವೀಕ್ಷಣೆ ಬರುವ ರೀತಿಯಲ್ಲಿ ಹಂತಹಂತವಾಗಿ ನಮ್ಮ ಸರಸ್ವತಿ ಪ್ರಭಾ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಕಟಿಸಲಗುವುದು. 8. ಸ್ಪರ್ಧೆಗೆ ಬಂದ ಎಲ್ಲಾ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪ್ರಕಟಿಸಿದ ನಂತರ ಸಮಾನವಾಗಿ ಒಂದು ತಿಂಗಳುಗಳ ಕಾಯುವಿಕೆಯ ನಂತರ ತಮ್ಮ ವೀಡಿಯೋ ಪಡೆದ ವೀಕ್ಷಣೆ, ಲೈಕ್, ಸರಾಸರಿ ವೀಕ್ಷಣಾ ಅವಧಿ ಹಾಗೂ ನಮ್ಮ ತೀರ್ಪುಗಾರರು ನೀಡುವ ಅಂಕಗಳನ್ನು ಸಂಗ್ರಹಿಸಿ ಅತ್ಯಧಿಕ ಅಂಕಗಳನ್ನು ಗಳಿಸಿದವರಿಗೆ ಬಹುಮಾನ ನೀಡಲಾಗುವುದು. 9. ಈ ಎಲ್ಲಾ ಪ್ರಕ್ರಿಯೆಗಳು ಮಗಿಯುವ ತನಕ ತಾವು ಕಳುಹಿಸಿರುವ ಭಜನಾ ವೀಡಿಯೋಗಳನ್ನು ಬೇರೆ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸ ಬಾರದು. ಪ್ರಕಟಿಸಿರುವುದು ನಮ್ಮ ಗಮನಕ್ಕೆ ಬಂದರೆ ಆ ಭಜನಾ ವಿಡಿಯೋಗಳನ್ನು ಬಹುಮಾನಕ್ಕೆ ಪರಿಗಣಿಸುವುದಿಲ್ಲ. 10. ಕಳೆದ ವರ್ಷದ ಸರಸ್ವತಿ ಪ್ರಭಾ ಭಜನೋತ್ಸವದಲ್ಲಿ ಭಾಗವಹಿಸಿದವರು ಸಹ ಈ ವರ್ಷದ ಭಜನೋತ್ಸವದಲ್ಲಿ ಭಾಗವಹಿಸಬಹುದು, ಆದರೆ ಪುನಃ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. 11. ಸಂಘಟಕರ ತೀರ್ಮಾನವೇ ಅಂತಿಮ
ಹೆಚ್ಚಿನ ಮಾಹಿತಿಗೆ 8217601102ಈ ಮೊಬೈಲ್ ನಂಬರಿಗೆ ಕೇವಲ ಸಂದೇಶದ ಮೂಲಕ ಸಂಪರ್ಕಿಸಿರಿ. ದಯವಿಟ್ಟು ಕರೆಯನ್ನು ಮಾತ್ರ ಮಾಡಬೇಡಿರಿ.