ಆಧ್ಯಾತ್ಮಾಚೆ ಲೇಕ ಸೂರು ಕೊರಚೆ ಸುತ್ತಾಪುನ್ನವ
ಯಜ್ಞೋಪವೀತಂ ಪರಮಂಪವಿತ್ರಂ |
ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರ್ಯಂ ಪ್ರತಿಮಂಚಶುಭ್ರಂ |
ಯಜ್ಞೋಪವೀತಂ ಬಲಮಸ್ತು ತೇಜಃ||ನಯನ ಮ್ಹಳಯಾರಿ ದೋಳೆ ಮ್ಹೊಣು ಅರ್ಥು ಜಾತ್ತಾ. ತ್ಯಾಂಚಿ ಉಪನಯನ ಮ್ಹಳಯಾರಿ ಆನ್ನೇಕ ದೋಳೊ ಮ್ಹಣಚೆ ಅರ್ಥು ಜಾತ್ತಾ. ಉಪನಯನಾಕ ಕೊಂಕಣಿಂತು
ಮೂಂಜಿ ಮ್ಹಣತಾತಿ. ಮೂಂಜಿ ದಿವಸು ಚರಕ್ಯಾಲೆ ಬಾಪಯಿ ತಿನೇಳೆಚೆ ಜಾನ್ನುವೆ ಘಾಲ್ನು , ಕಾನ್ನಾಂತು ಗಾಯಿತ್ರಿ ಮಂತ್ರ ಸಾಂಗತಾ. ಇತ್ತುಲೆ ಕಾಳ ಚರ್ಡ ಜಾವ್ನಾಶ್ಶಿಲೊ ತಾಕ್ಕಾ ಜೀವನ ಸಂಗ್ರಾಮಾಂತು ಅನುಭವ ವ ಜ್ಞಾನ ಜೊಡ್ಚೆ, ನಾಂವೆ ಶಿಕ್ಷಣ ಹಾಂಗಾಚಾನ ಸುರುವಾತ ಜಾತ್ತಾ. ಇತ್ತುಲೆ ಕಾಳ ಬಾಯರಿ ದೋಳ್ಯಾಕ ದೆಕ್ಕು ಪೊಡಚೆ ಮಾತ್ರ ದೆಕ್ತಾ ಆಶ್ಶಿಲೊ ತೊ ಆನಿ ಮುಖಾರಿ ಅಂತರ್ಯ ಬಗಲೇನ ಪಳೋವಚೆ ದೋಳೊ ಗುರುಮುಖೇನ ಪ್ರಾಪ್ತ ಕೋರ್ನು ಘೆತ್ತಾ. ಥಂಯ್ಚಾನ ತೋ ಬ್ರಹ್ಮಚಾರಿ. ತಾಗೇಲೆ ಶಿಕ್ಷಣ ಪೂರ್ತಿ ಜಾವ್ನು ಗ್ರಹಸ್ಥ ಜಾಲ್ಯಾರಿ ಮೊರು ಪರ್ಯಂತ ತಾಕ್ಕಾ ಜಾನ್ನುವೇಚೆ ಸಂಬಂಧ ಚುಕ್ಕನಾ. ಮೂಂಜಿ ವೇಳ್ಯಾರಿ ತಿನೇಳೋ ಆಶ್ಶಿಲೆ ಜಾನ್ನುವೆ ವ್ಹರಡೀಕೆ ವೇಳ್ಯಾರಿ ಸ ಯಾಳೊ ಜಾತ್ತಾ.
ರೂಖ-ಝಾಡ ವೈಶಾಖಾಂತು(ವಸಂತ ಋತು ಆಯ್ಲ ಸತಾ) ಪ್ರತಿ ವರ್ಷ ಪಾನ್ನ ಜೊಳ್ನು ಪೊರನೆ ಲ್ಯಾಕ ಚುಕ್ತಾ ಕೋರ್ನು ನಂವೆಂ ಅಂಕ್ರೇನಿ ನವೀನ ಲ್ಯಾಕ ಸೂರ ಕರತಾ. ಸರ್ಕಾರ ಮಾರ್ಚ್ ಮ್ಹಹಿನ್ಯಾ ಅಖೈರೀಕ ಆಪಣಾಲೆ ಪೊರನೆ ವರ್ಷಾ ಲ್ಯಾಕ ಕೈದ ಕೋರ್ನು ನಂವೆಂ ಲ್ಯಾಕ ಸೂರ ಕರ್ತಾ. ತಶ್ಶೀಚಿ ವ್ಯಾಪಾರಸ್ಥು ದೀವಾಳಿ ಪರಭೆ ಸಂದರ್ಭಾರಿ ಪೊರನೆ ಖಾತೆ-ಕೀರ್ದಿ(ಲೆಕ್ಕಾ ಪುಸ್ತಕ) ಉಡ್ಡೊವನು ನವೀನ ಘೆತ್ತಾ. ತಶ್ಶೀಚಿ ಬ್ರಾಹ್ಮಣಾನ ಆಪಣಾನ ಮಾಗಸೀಚೆ ಏಕ ವರ್ಷ ಕೆಲೇಲೆ ಧ್ಯಾನ, ಜಪ, ತಪ, ದೇವ ಪೂಜೇಚೆ ಫಲ ಕೃಷ್ಣಾರ್ಪಣ ಕೋರ್ನು ಪರತ ಜಪ-ತಪ, ಪೂಜೆ ತಸ್ಸಾಲೆ ಆಧ್ಯಾತ್ಮಿಕ ಸಾಧನಾ ಆರಂಭ ಕೊರಚೆ ಪರ್ವ ದಿವಸು ಹೇ ಸುತ್ತಾಪುನ್ನವ ಮ್ಹಣಚೆ ಸಮ ಜಾತ್ತ ಕಿತ್ಕಿ? ಮ್ಹಳ್ಯಾರಿ ಬ್ರಾಹ್ಮಣಾಂಕ ಹೇ ಸರ್ವಾ ಪಶಿ ವ್ಹಡ ಪರಭ ಮ್ಹಳಯಾರಿ ಚೂಖಿ ಜಾಯಸನಾ. ನ್ಹಂಹಿಸಿ ಹೇ ಜಪ-ತಪಾಕ ಸುಯೋಗ್ಯ ಕಾಲ. ಕಿತಯಾಕ ಮ್ಹಳಯಾರಿ ಬಾಯರಿ ಧೋ ಧೋ ಮ್ಹೊಣು ಪಾವ್ಸು ರೊಖೈತಾ ಆಸತಾ. ಗದ್ದೊ-ಖೇತಿ ಕಾಮ ಪೂರಾಯಿ ಜಾವ್ನು ಆಸ್ತಾ. ಮುಖಾರಿ ಯವಚೆ ಜನ್ಮಾಷ್ಟಮಿ, ಥಂಯಿ, ಚೌತಿ, ನೋಪಿ, ಮಾಳ ಆನಿ ದೀವಾಳಿ ಪರಬೇಕ ಶುಚಿರ್ಭೂತ ಜಾವಚಾಕ ನಾಕ್ಕವೇ? ಋಗ್ವೇದಿ ಲೋಕಾಂಕ ಶ್ರಾವಣಾಚೆ ಶ್ರವಣ ನಕ್ಷತ್ರ ಆಯ್ಯಿಲೆ ದಿವಸು, ಯಜುರ್ವೇದಿಂಕ ಫುನ್ವೆ ದಿವಸು ಆನಿ ಸಾಮವೇದಿಂಕ ಭಾದ್ರಪದ ಮಾಸಾಚೆ ಹಸ್ತ ನಕ್ಷತ್ರ ಆಯ್ಯಿಲೆ ದಿವಸು
ಜಾನ್ನುವೆ ಪರಭ ಜಾವ್ನಾಸ್ತ. ತ್ಯಾ ಖಾತ್ತಿರಿಚಿ ಹಾಕ್ಕಾ ಉಪಾಕರ್ಮ, ನೂಲುಹುಣ್ಣಿಮೆ, ಶ್ರವಣಿ, ಜಾನ್ನುವೆ ಪರಬ ಮ್ಹೊಣು ಪೂರಾ ಆಪೈತಾತಿ. ಆಧ್ಯಾತ್ಮಿಕ ಜಾವ್ನು ಜಾನ್ನುವೆ ಪರಭೆಕ ವೇದಗ್ರಹಣ ಸಂಸ್ಕಾರ ಮ್ಹಣಚೆ ಸೂಕ್ತ. ಅನ್ನ, ವಸ್ತು, ಪೂಲ, ಫಳ, ಮನುಷ್ಯು, ಪಶು ಸರ್ವಾಂಕ ಏಕ ಆಯುಷ್ಯ ಮ್ಹೊಣು ಆಸ್ತಾ. ಸಜೀವಿ (ಮನುಷ್ಯು, ಪಶು-ಪಕ್ಷಿ) ಆಯುಷ್ಯ ಸಂಪ್ಲ ಕೂಡ್ಲೆ ಮ್ಹರತಾತಿ. ತ್ಯಾಂಚಿ ಅನ್ನ, ಪೂಲ, ಫಳ ಪೂರಾ ಆಯಸ್ಸ ಸರಲ ಮಾಗಿರಿ ತ್ಯಾ ಹಳಸೂವ್ನು ಘೆಲ್ಲಾ (ತಂಗಳು) ಮ್ಹಣತಾತಿ, ನಾ ಬಾವತಾತಿ. ತಶ್ಶೀಚಿ ಆಮ್ಮಿ ಶಿಕ್ಕಿಲೆ ವೇದ, ಮಂತ್ರ, ಜ್ಞಾನ ಹೇವಯಿ ನಿತ್ಯ ಅಭ್ಯಾಸು ಕರ್ತಾ ಆಸಲೇರಿಚಿ ಮೊಂಡ ಜಾಲೀಲೆ ಕೊಯ್ತಿಕ ತೊಂಡ ತಾಪ್ಪೆಚೆ ವರಿ, ತ್ಯಾ ವೇದ ಮಂತ್ರಾಕ ಚೈತನ್ಯ ದಿವ್ಕಾ ಪಡ್ತಾ. ಹೋಮಾಗ್ನಿ ಮೂಖಾಂತರ ಹೇ ಕಾರ್ಯ ಸುತ್ತಾಫನ್ವೆ ದಿವಸು ಕೋರ್ನು ಪರತ ಆಮ್ಮಿ ವೇದಾದ್ಯಯನ ಮುಖಾರಸಿಕಾ. ತಶ್ಶೀಚಿ ಆನ್ನೇಕ ದೃಷ್ಟೀನ ಸಾಂಕಾ ಮ್ಹಳಯಾರಿ ಪಾವ್ಸಾಡಿ ಮಾಗಶಿ ಸರಲೆ ಮಾಗಿರಿ ಗ್ರಹಸ್ಥು, ಜಾಂವೊ ಬ್ರಹ್ಮಚಾರಿ ಆಪ್ಪಆಪಣಾಂಗೆಲೆ ಖೇತಿ, ವ್ಯವಹಾರು ಇತ್ಯಾದಿ ಕಾಮ್ಮ, ಪ್ರವಾಸ ಇತ್ಯಾದೀಂತು ಮಗ್ನ ಜಾವ್ನು ಉರ್‍ತಾ. ತೆದ್ದನಾ ತಾಕ್ಕಾ ನಿಯಮಿತ ಜಾವ್ನು ವೇದಾಧ್ಯಯನ, ಜಪ-ತಪ ಕೊರಚಾಕ ಅಸಾಧ್ಯ ಜಾವ್ನು ತಾಗೇಲೆ ಆಧ್ಯಾತ್ಮಿಕ ಉನ್ನತಿ ಊಣೆ ಜಾವ್ನಾಸ್ಸುಕ ಪುರೊ. ತಶ್ಶಿ ಊಣೆ ಜಾಲೀಲೆ ನಾಂವೆ ಸೋಣಾಶ್ಶಿಲೆ ವೇದಾಧ್ಯಯನ ಪರತ ಸುರುವಾತ ಕೊರಚಾಕ ಹೇ ಸಂಧಿಕಾಲ. ತ್ಯಾ ಖಾತ್ತಿರಿ ಬ್ರಾಹ್ಮಣಾಂಕ
ಸುತ್ತಾ ಫುನ್ನವ ವಿಶೇಷ ಪರಭ ಜಾವ್ನಾಸ್ಸ.
ಓಂಕಾರೋಗ್ನಿಶ್ಚ ನಾಗಶ್ಚ | ಸೋಮಃ ಪಿತೃಪ್ರಜಾಪತೀ ||
ವಾಯುಃ ಸೂರ್ಯೋ ವಿಶ್ವೇದೇವಾ | ಇತ್ಯೇತಾ ಸ್ತಂತುದೇವತಾಃ ||
ಮ್ಹಳಯಾರಿ ಜಾನ್ನುವೆಂತು ೧,ಓಂ ಕಾರ; ೨, ಅಗ್ನಿ; ೩,ನಾಗ; ೪,ಸೋಮ; ೫,ಪಿತೃ; ೬,ಪ್ರಜಾಪತಿ; ೭, ವಾಯು; ೮,ಸೂರ್ಯ; ೯,ವಿಶ್ವೇದೇವಾ. ಅಶ್ಶಿ ನವ್ವ ಲೋಕ ದೇವು ಆಸತಾತಿ ಕಂಯಿ. ತೀನ ಯಾಳೊ ಕಿತಯಾಕ ಮ್ಹಳಯಾರಿ ಸಕ್ಕಾನಿ, ಧೋಂಪಾರಾ ಆನಿ ಸಾಂಜವಾಳೆಚೆ ಪ್ರತೀಕ, ಬ್ರಹ್ಮ, ವಿಷ್ಣು, ಈಶ್ವರಾಲೆ ಪ್ರತೀಕ ಮ್ಹಣತಾತಿ. ಶ್ರವಣ ನಕ್ಷತ್ರ ಹೇ ಶ್ರೀ ಹರಿಲೆ ಜನ್ಮ ನಕ್ಷತ್ರ. ಶ್ರಾವಣ ಸಗಳೇ ವರ್ಷಾಂತೂ ಶ್ರೇಷ್ಠ ಮ್ಹಹಿನೋ. ಶ್ರೀ ಹರಿ – ಲಕ್ಷ್ಮೀ, ಈಶ್ವರ -ಪಾರ್ವತಿ, ತಾಂಕಾ ಸಂಬಂಧ ಆಶ್ಶಿಲೆ ಸರೋಪು, ದಶಾವತಾರಾಂತು ಏಕ ಜಾಲೀಲೆ ಕೃಷ್ಣಾಷ್ಟಮಿ ಸಕ್ಕಡ ಹೇಂಚಿ ಮ್ಹಹಿನ್ಯಾಂತು ಎತ್ತಾ. ಅಸ್ಸಾಲೆ ಪವಿತ್ರ ಮ್ಹಹಿನ್ಯಾಂತು ಬ್ರಾಹ್ಮಣಾನಿ ಆಧ್ಯಾತ್ಮಾಚೆ ನವೆಂ ಲೆಕ್ಕಾಚಾರ ಆರಂಭ ಕೊರಚೆ ಪರ್ವ ದಿವಸೂಚಿ ಸುತ್ತಾ ಫುನ್ನವ.
ಆಮಕಾ ವೇದ ದಿಲೇಲೆ ಕೋಣೆ? ಋಷಿ-ಮುನೀನ ನ್ಹಂಹಿವೇ? ಋಷಿ-ಮುನಿ ಆಮಗೇಲೆ ಪೂರ್ವಜ ಮ್ಹಣತಾತಿ. ಪ್ರತಿಯೇಕ ಗೋತ್ರ ಪ್ರವರ ಕರತಾನಾ ಋಷಿವರ್ಯಾಲೆ ನಾಂವ ಯತ್ತಾ. ತಾಂತು ಪ್ರಮುಖ ಮ್ಹಳಯಾರಿ ಕಶ್ಯಪ, ಅತ್ರಿ, ಭಾರದ್ವಜ, ವಿಶ್ವಾಮಿತ್ರ, ಜಮದಗ್ನಿ, ವಸಿಷ್ಟಾ ಮ್ಹಣಚೆ ಸಪ್ತರ್ಷಿ. ಜಾನ್ನುವೆ ಪರಭೆ ದಿವಸು ತಾಂಕಾ ಪೂಜ್ಜುನು, ತಾಂಗೆಲೆ ಅನುಮತಿ ಬರಶಿ ಋಗ್ವೇದಾಚೆ ಧಾ ಮಂಡಲಾದ್ಯಂತಾಚೆ ಶ್ಲೋಕಾಚಾನ ಆಹುತಿ ದೀವ್ನು ದೇವು, ಋಷಿ, ಪಿತೃ ಆಚಾರ್ಯಾಂಕ ತರ್ಪಣ ದಿವ್ಕಾ. ಹೇ ದೀಸು ದಧಿಸಕ್ತುಪ್ರಾಶನ ಆನಿ ಯಜ್ಞೋಪವೀತ (ಜಾನ್ನುವೆ) ಧಾರಣೆಕ ಚ್ಹಡ ಮಹತ್ವ ಆಸ್ಸ. ಹೇ ಆಮಕಾ ವೇದ ದಿಲೀಲೆ ಋಷು-ಮುನಿಂಕ ಆಮ್ಮಿ ಕೃತಜ್ಞತಾ ಪಾವಯ್ಚೆ ನಮೂನೋ ಹೇ `ಸುತ್ತಾಫುನ್ನವ ಜಾವ್ನಾಸ್ಸುಕ ಪುರ್‍ವೆ? ಆಮಗೇಲೆ ಗೌಡಸಾರಸ್ವತ ಬ್ರಾಹ್ಮಣ ಸಮಾಜಾಂತು ಹರ್‍ಯೇಕು ಗ್ರಹಸ್ಥು ಆಪಣಾಲೆ ಚರ್ಡುಂವಾ ಬರಶಿ ದೇವಳಾಕ ಜಾಂವೊ ಸಮಾಜ ಮಂದಿರಾಕ ನಾಂವೆ ಮ್ಹಾಲ್ಗಡ್ಯಾಂಲೆ ಘರಾಕ ವಚ್ಚೂನು ಪಂಚಗವ್ಯ ಪೀವ್ನು ಶುಚಿರ್ಭೂತ ಜಾವ್ನು ಥಂಯಿ ಘಡಚೆ ಹೋಮಾಂತು ವಾಂಟೊ ಘೇವ್ನು ದಕ್ಷಿಣೆ ದೀವ್ನು ಭಟ್ಮಾಮ್ಮಾ ಕಡೇಚಾನ ವಿಧಿ-ವಿಧಾನ ಪ್ರಮಾಣೆ ಜಾನ್ನುವೆ ಘಾಲ್ನು ಘೆವ್ನು, ಆಶೀರ್ವಾದು ಘೆತ್ತಾತಿ. ನವೀನ ಜಾವ್ನು ಮೂಂಜಿ ಜಾಲೇಲೆ ವಟು ದೇವಳಾಕ ವಚ್ಚೂನು, ಪುರೋಹಿತ ಭಟ್ಮಾಮ್ಮಾನ ಕೊರಚೆ ಹೋಮಾಂತು ವಾಂಟೊ ಘೇವ್ನು ಮೂಂಜಿ ದಿವಸು ಘಾಲ್ನು ಘೆತ್ತಿಲೆ ದಂಡ, ದರ್ಬೆಚೆ ಕೂರ್‍ಟಾದೋರಿ, ಕಾವಿ ಆಂವ್ಗೋಲೆ ವಿಸರ್ಜನ ಕೋರ್ನು, ಜಾನ್ನುವೆ ಘಾಲ್ನು ಘೆತ್ತಾತಿ. ಕೆಲವ ಕಡೇನ ಅನ್ನದಾನ ವರೇಕ ಕರತಾತಿ. ತೆಂ ದಿವಸು ಪಿತೃ ತರ್ಪಣ ಸೈತ ದಿತ್ತಾತಿ. ಘರ್‍ಕಡೆ ಆಯ್ಲ ಮಾಗಿರಿ ತುಳ್ಸಿಕಟ್ಟೆಕ ಆನಿ ಘರಾದೇವಾಕ ಏಕ್ಕೇಕ ಜಾನ್ನುವೆ ಘಾಲ್ನು, ಪಾಂಯಪೋಣು ದೇವಾಲೆ ಪೂಜಾ ಕೋರ್ನು ದಾಕಲೆ, ಮ್ಹಾಲ್ಗಡ್ಯಾ ತಾಕೂನು ಜಾನ್ನುವೆ ಘಾಲ್ನು ಘೇವ್ನು, ಆಶೀರ್ವಾದ ಘೆತ್ತಾತಿ. ತೆ ದಿವಸು ಪೂಜ್ಜಿಲೆ ಜಾನ್ನುವೆ ಸಾನ್ಸಾನ ಚೆಲ್ಲಿಯಾ ಚರ್ಡುವಾಂಕ ಮ್ಹೋಗಾನ ಘಾಲ್ನು ಆಶೀರ್ವಾದು ಕೊರಕಾ. ಮೆಲ್ಲಿಲೆ ಮ್ಹಾಲ್ಗಡೆ ಸುವಾಸಿನಿ ಬಾಯ್ಲಮನ್ಶೆಲೆ ಉಡ್ಗಾಸಾಕ ವಾಣು, ತಾಜ್ಜ ಮುಖಾರಿ ನಂವೆ ಕಾಪ್ಪಡ ದವರೂನು
ವಾಡಪ ಮ್ಹೊಣು ಕರತಾತಿ. ತೆಂ ದಿವಸು `ದರ್ಯಾದೂದ್ ಮ್ಹಳಯಾರಿ ಸಮುದ್ರ ಪೂಜಾ ಕೋರ್ನು ದೇವಳಾಂತು ಲಕ್ಷಪುಷ್ಪಾರ್ಚನ ಕರತಾತಿ. ಮಂಗಳೂರ್‍ಚೆ ಶ್ರೀ ವೆಂಕಟರಮಣ ದೇವಳಾಂತು ಧಾ ಸಮಸ್ತ ಮೇಳ್ನು ಸಾನ ಜಾಲೇಲೆ ಬಂಗ್ರಾ ನಾರ್‍ಲು ಕೋರ್ನು “ಸಮುದ್ರ ರಾಜಾಕ ಸಮರ್ಪಣ ಕೋರ್ನು ಪೂಜಾ ಕರತಾತಿ. ಹೇ ಪೂಜೆ ಜಾಲ್ಲ ನಂತರ ಸಮುದ್ರಾಚೆ ಪ್ರತಾಪು ಊಣೆ ಜಾತ್ತಾ ಮ್ಹಣಚೆ ನಂಬಿಗಾಯಿ ಆಸ್ಸ. ಸುತ್ತಾ ಫುನ್ವೆಕ ಚೆಣೆಂ ಗ್ಹಶಿ, ಶೇಂವಯಿ ಆನಿ ರೋಸು, ದಾಳಿಸಾರು, ಸುಕ್ಕೆ, ಪಣಸಾ ಪಾನ್ನಾ ಖೊಟ್ಟೊ, ದೀವ್ಗಡ್ಗಿ, ಸೂರ್ನು, ಕಣಂಗ, ನೇಂದ್ರ ಕೇಳೆಂ ಇತ್ಯಾದಿ ಪೋಡಿ, ಪತ್ರಾಡೊ, ಪೋವಾ ಖೀರಿ, ಪಾತ್ತೊಳಿ ಇತ್ಯಾದಿ ಕೋರ್ನು, ಕಾಯಳೇಕ ವ್ಯಾಸ ದವರೂನು, ಪರಭೆ ಜವಣ ಜವತಾತಿ. ಕೆಲವ ಲೋಕ ನವೀನ ಜಾವ್ನು ಲಗ್ನ ಜಾಲೇಲೆ ಧೂವ್ಯಾಕ ಆನಿ ಜಾಂವಯಾಂಕ ಆಪ್ಪೋನು, ಜಾಂವಯಾಕ ಜಾನ್ನುವೆಂ ಘಾಲ್ನು, ಬಸ್ಸೊನು ಸೇಸ ಭೋರ್ನು, ಆರ್ತಿ ಕೋರ್ನು ಉಡ್ಗಿರೆ ದಿತ್ತಾತಿ.